ಉತ್ತರ ಪ್ರದೇಶ: ಕಾಂಗ್ರೆಸ್ ನಾಯಕ ಪ್ರದೀಪ್ ಜೈನ್‍ಗೆ ಗೃಹಬಂಧನ

0
433

ಸನ್ಮಾರ್ಗ ವಾರ್ತೆ

ಝಾನ್ಸಿ,ಡಿ.29: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪ್ರದೀಪ್ ಜೈನ್ ಆದಿತ್ಯರನ್ನು ಡಿಸೆಂಬರ್ 25ರಿಂದ ಉತ್ತರ ಪ್ರದೇಶ ಪೊಲೀಸರು ಗೃಹಬಂಧನದಲ್ಲಿರಿಸಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ಎಸ್.ಎ ಬೊಬ್ಡೆಗೆ ಪತ್ರ ಬರೆದಿದ್ದಾರೆ. ಗೃಹ ಬಂಧನದಲ್ಲಿಟ್ಟಿರುವುದಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ. ಆದರೆ, ತಂದೆಯ ರಾಜಕೀಯ ನಿಲುವಿನೊಂದಿಗೆ ಜಿಲ್ಲಾಜಡಳಿತಕ್ಕೆ ಸಹಮತ ಇಲ್ಲ. ಇದು ಗೃಹ ಬಂಧನಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ಪುತ್ರ ಗೌರವ್ ಜೈನ್ ಆರೋಪಿಸಿದ್ದಾರೆ. ತಂದೆಯ ಮೂಲಭೂತ ಹಕ್ಕು ತಡೆಯೊಡ್ಡಿರುವುದನ್ನು ಚೀಫ್ ಜಸ್ಟಿಸ್‍ರ ಗಮನಕ್ಕೆ ಅವರು ತಂದಿದ್ದಾರೆ.

ಇದೇ ವೇಳೆ, ಡಿಸೆಂಬರ್ 26ರಂದು ಲಲಿತಪುರಿಯಿಂದ ಚಿತ್ರಕೂಟಕ್ಕೆ ನಡೆಯಲಿದದ ಗೋಸಂರಕ್ಷಣ, ರೈತ ರ್ಯಾಲಿಯಲ್ಲಿ ಭಾಗವಹಿಸದಂತೆ ಜೈನ್ ಸಹಿತ ಕಾಂಗ್ರೆಸ್ ನಾಯಕರಿಗೆ ಗೃಹಬಂಧನದಲ್ಲಿರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾನೂನು ವ್ಯವಸ್ಥೆ ಹದಗೆಡದಿರಲು ಕಾಂಗ್ರೆಸ್ ನಾಯಕರನ್ನು ತಡೆದಿದ್ದೇವೆ ಎಂದು ಡೆಪ್ಯುಟಿ ಸೂಪರಿಡೆಂಟ್ ರಾಜೆಡ್ ಕುಮಾರ್ ತಿಳಿಸಿದರು.