ಧಾಕಡ್ ಶೂಟಿಂಗ್ ಲೊಕೇಶನ್‍ನಲ್ಲಿ ನಟಿ ಕಂಗನಾ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

0
549

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶ: ರೈತರ ಹೋರಾಟದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ ರಾಣಾವತ್‍ರ ಶೂಟಿಂಗ್ ಲೋಕೇಶನ್‍‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅವರ ಹೊಸ ಸಿನೆಮಾ ಧಾಕಡ್‍ನ ಲೊಕೇಶನ್‍ನಲ್ಲಿ ಪ್ರತಿಭಟನೆ ನಡೆದಿತ್ತು.

ರೈತ ಹೋರಾಟಗಾರರನ್ನು ಭಯೋತ್ಪಾದಕರೆಂದು ಟ್ವೀಟ್ ಮಾಡಿದ್ದು ಪ್ರತಿಭಟನೆಗೆ ಕಾರಣವಾಗಿದೆ. ಕಂಗನಾ ಕ್ಷಮೆ ಯಾಚಿಸಬೇಕೆಂದು ಪ್ರತಿಭಟಕಾರರು ಆಗ್ರಹಿಸಿದ್ದಾರೆ. ಮಧ್ಯಪ್ರದೇಶದ ಬೆಡುಲಿನಲ್ಲಿ ಕಂಗನಾರ ಸಿನೆಮಾ ಚಿತ್ರೀಕರಣ ನಡೆಯುತ್ತಿದೆ.

ತನ್ನ ಲೊಕೇಶನ್ ಹೊರಗೆ ಪ್ರತಿಭಟನೆ ನಡೆಸುವವರ ವೀಡಿಯೊವನ್ನು ಕಂಗನಾ ಸ್ವತಃ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಲೊಕೇಶನ್ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಅವರನ್ನು ತೆರವುಗೊಳಿಸಿದರು ಕಾರಿನಲ್ಲಿ ಇನ್ನೊಂದು ದಾರಿಯಲ್ಲಿ ಹೆಚ್ಚು ದೂರ ಸಂಚರಿಸಬೇಕಾಯಿತು. ಇದು ಮಹಿಳೆಯೊಬ್ಬರ ಅವಸ್ಥೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.