ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪ್ರಧಾನಿಯ ತಮಿಳ್ನಾಡು, ಕೇರಳ ಸಂದರ್ಶನದ ಮೊದಲೇ ಟ್ವಿಟರ್ ನಲ್ಲಿ ಗೋಬ್ಯಾಕ್ ಮೋದಿ ಅಭಿಯಾನ ಶುರುವಾಗಿದೆ. ಚುನಾವಣೆಯ ಮೊದಲು ಮೋದಿಯ ಸಂದರ್ಶನ ನಡೆಯುತ್ತಿದೆ.ತಮಿಳ್ನಾಡಿನ ಕಾರ್ಯಕ್ರಮದ ಬಳಿಕ ಮೋದಿ ಕೊಚ್ಚಿಗೆ ಬರಲಿದ್ದಾರೆ. ಟ್ವಿಟರ್ ನಲ್ಲಿ ಗೋಬ್ಯಾಕ್ ಮೋದಿ ಹ್ಯಾಶ್ ಟ್ಯಾಗ ಪೋಸ್ಟ್ ಗಳು ತುಂಬಿಕೊಂಡಿವೆ. ಕಾರ್ಟೂನ್ಗಳ ಸಹಿತ ಟ್ವಿಟರ್ ನಲ್ಲಿ ಪ್ರತಿಭಟನೆ ರಾರಾಜಿಸುತ್ತಿವೆ. ಶಿಥಿಲಗೊಂಡಿರುವ ಅರ್ಥವ್ಯವಸ್ಥೆ, ನಿರುದ್ಯೋಗ, ರೈತ ಹೋರಾಟ, ಇಂಧನ ಬೆಲೆ ಹೆಚ್ಚಳ ಬೆಟ್ಟು ಮಾಡಿ ಗೋಬ್ಯಾಕ್ ಮೋದಿ ಹ್ಯಾಶ್ ಟ್ಯಾಗ್ ಟ್ರಂಡ್ ಆಗಿದೆ.
ಕೇರಳ, ತಮಿಳ್ನಾಡು ವಿಧಾನಸಭಾ ಚುನಾವಣೆ ನಿಕಟವಾಗಿದ್ದು ಇದೇ ವೇಳೆ ಮೋದಿ ಎರಡು ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿಯ ಲಾಭವಾಗುವ ಅಧಿಕೃತ ಯೋಜನೆ ಘೋಷಿಸುವುದು ಉದ್ದೇಶವಾಗಿದೆ. ಜ. 26ರ ಪ್ರಧಾನಿಯ ಮಧುರೆ ಸಂದರ್ಶನದ ಮೊದಲು ಟ್ವಿಟರ್ ನಲ್ಲಿ ಗೊಬ್ಯಾಕ್ ಮೋದಿ ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿತ್ತು. ಏಮ್ಸ್ ಗೆ ಶಿಲನ್ಯಾಸ ಕಾರ್ಯಕ್ರಮಕ್ಕೆ ಮೋದಿ ಬಂದಿದ್ದರು. ರೂಢಿಯಂತೆ ಮೋದಿಯ ಭೇಟಿಯ ಮೊದಲು ಈ ಬಾರಿಯೂ ಪ್ರತಿಭಟನೆ ವ್ಯಕ್ತವಾಗಿದೆ.












