ಕಾಂಗ್ರೆಸ್ ಅಂದು ಸರಿಯಾದ ನಿಲುವು ತೆಗೆದುಕೊಂಡಿದ್ದರೆ ದೇಶದ ಪರಿಸ್ಥಿತಿಯು ವಿಭಿನ್ನವಾಗಿರುತ್ತಿತ್ತು: ಪಿಣರಾಯಿ ವಿಜಯನ್

0
987

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಆ.6: ರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜೆ ಸಮಾರಂಭದ ಕುರಿತು ಕಾಂಗ್ರೆಸ್ ನಿಲುವಿನ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಈ ಕಾರ್ಯಕ್ರಮವನ್ನು ಸ್ವಾಗತಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಯು ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹ ರಾವ್ ಕೂಡ ಇದೇ ರೀತಿಯ ನಿಲುವನ್ನು ಹೊಂದಿದ್ದರು ಎಂಬುದನ್ನು ಸಮರ್ಥಿಸುತ್ತದೆ ಎಂದು ಅವರು ಕುಟುಕಿದರು.

“ಅವರು ನಿಜವಾದ ಜಾತ್ಯತೀತತೆಯ ಬಗ್ಗೆ ಸರಿಯಾದ ನಿಲುವನ್ನು ತೆಗೆದುಕೊಂಡಿದ್ದರೆ, ಆಗ ದೇಶದ ಪರಿಸ್ಥಿತಿಯು ವಿಭಿನ್ನವಾಗಿರುತ್ತಿತ್ತು. ಕಾಂಗ್ರೆಸ್ ಯಾವಾಗಲೂ ಮೃದು ಹಿಂದುತ್ವ ನಿಲುವುಗಳನ್ನು ತಳೆದಿದೆ. ಅಯೋಧ್ಯೆಯನ್ನು ಗಮನಿಸಿ, ಕಾಂಗ್ರೆಸ್ ಎಲ್ಲವನ್ನೂ ಮಾಡಿದೆ ಮತ್ತು ಬಾಬರಿ ಮಸೀದಿ ನೆಲಸಮವಾದಾಗಲೂ, ರಾವ್ ಮೌನವಾಗಿದ್ದರು. ಈಗ ಅಂತಹ ವಿಷಯಗಳ ಬಗ್ಗೆ ಮಾತನಾಡದಿರುವುದು ಉತ್ತಮ” ಎಂದು ಅವರು ಹೇಳಿದರು.

ಬುಧವಾರ, ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ಮಾಡಿದರು, ಅದರ ಮೊದಲ ಇಟ್ಟಿಗೆಯನ್ನು ಹಾಕಿದರು.

ಪ್ರಿಯಾಂಕಾ ಗಾಂಧಿ ತಮ್ಮ ಹೇಳಿಕೆಯಲ್ಲಿ, “ಭಗವಾನ್ ರಾಮ ಮತ್ತು ಅವರ ಬೋಧನೆಗಳ ಆಶೀರ್ವಾದವನ್ನು ಹೊಂದಿರುವ ಈ ಕಾರ್ಯಕ್ರಮವು ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಸಂಯೋಜನೆಯ ಸಂಕೇತವಾಗಬೇಕು” ಎಂದು ಹೇಳಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.