ಸನ್ಮಾರ್ಗ ವಾರ್ತೆ
ರೇವಾ:ನೀರಿನ ಸಂರಕ್ಷಣೆ ಕುರಿತು ಮಧ್ಯಪ್ರದೇಶ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿಚಿತ್ರವಾದ ಹೇಳಿಕೆಯನ್ನು ನೀಡುವ ಮೂಲಕ ಮತ್ತೊಮ್ಮೆ ಸುದ್ದಿಗೀಡಾಗಿದ್ದಾರೆ. ಭಾನುವಾರ ಜಿಲ್ಲೆಯ ರೇವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH | Rewa, Madhya Pradesh: "Lands are running dry of water, it must be saved… Drink alcohol, chew tobacco, smoke weed or smell thinner and solution but understand the importance of water," says BJP MP Janardan Mishra during a water conservation workshop pic.twitter.com/Nk878A9Jgc
— ANI (@ANI) November 7, 2022
“ಭೂಮಿಗಳು ನೀರಿಲ್ಲದೇ ಬರಡಾಗುತ್ತಿವೆ, ಅದನ್ನು ಉಳಿಸಬೇಕು. ನೀರನ್ನು ಕಡಿಮೆ ಬಳಸಿ ಹೆಚ್ಚು ಉಳಿಸಬೇಕು. ನೀರನ ಸಂರಕ್ಷಣೆಗಾಗಿ ಹಣವನ್ನು ಖರ್ಚು ಮಾಡಬೇಕು. ಸಾಧ್ಯವಾದಷ್ಟು ಹಣವನ್ನು ಖರ್ಚು ಮಾಡಿರಿ ಒಂದೋ ಗುಟ್ಕಾ ತಿನ್ನಿರಿ, ಮದ್ಯವನ್ನು ಸೇವಿಸಿ, ಅಥವಾ ನಶ್ಯೆ ತಗೆದುಕೊಳ್ಳಿ, ಅಯೋಡೆಕ್ಸ್ ತಿನ್ನಿರಿ ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ,” ಎಂದು ಜನಾರ್ದನ್ ಮಿಶ್ರಾ ಜಲ ಸಂರಕ್ಷಣಾ ಕಾರ್ಯಾಗಾರದಲ್ಲಿ ಹೇಳಿರುವುದು ವಿವಾದ ಹುಟ್ಟು ಹಾಕಿದೆ.
“ಯಾವುದೇ ಸರ್ಕಾರವು ನೀರಿನ ತೆರಿಗೆಯನ್ನು ಮನ್ನಾ ಮಾಡುವುದಾಗಿ ಘೋಷಿಸಿದರೆ ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ ಮತ್ತು ನೀವು ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿರಿ” ಎಂದು ಜನರಿಗೆ ಇದೇ ಸಮಾರಂಭದಲ್ಲಿ ಅವರು ಹೇಳಿದ್ದಾರೆ.
ಮಿಶ್ರಾ ಇಂತಹ ವಿಚಿತ್ರ ಹೇಳಿಕೆಗಳ ಮೂಲಕ ಸುದ್ದಿಗೀಡಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಬರೀ ಕೈಯಿಂದಲೇ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ಮಿಶ್ರಾರವರ ವಿಡಿಯೋವೊಂದು ವೈರಲ್ ಆಗಿತ್ತು.












