ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 24: ದೇಶದಲ್ಲಿ ಕೊರೊನ ದೃಢಪಟ್ಟಿರುವವರ ಸಂಖ್ಯೆ 23,077 ಆಗಿದೆ. 4749 ಮಂದಿಗೆ ರೋಗ ಗುಣವಾಗಿದೆ. ಈಗ 17,610 ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಮೃತಪಟ್ಟವರು 718 ಮಂದಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1684 ಮಂದಿಗೆ ಕೊರೊನ ಬಂದಿದೆ. 37 ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ ಹೊಸದಾಗಿ 36 ಮಂದಿಗೆ ಹೊಸದಾಗಿ ಕೊರೊನಾ ದೃಢಪಟ್ಟಿದೆ.
ಜೈಪುರದಲ್ಲಿ 13, ಕೋಟ್ಟಯಂನಲ್ಲಿ 18, ಝಾಲ್ವರಿನಲ್ಲಿ ನಾಲ್ಕು ಮಂದಿಗೆ ಮತ್ತು ಭರತ್ ಪುರದಲ್ಲಿ ಒಬ್ಬನಿಗೆ ಹೊಸದಾಗಿ ಕೊರೊನಾ ದೃಢಪಟ್ಟಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












