ಕೊರೋನಾ: ಇಸ್ರೇಲ್ ನಲ್ಲಿ 15 ಸಾವು, ಗಾಝದಲ್ಲೂ ಪಾಸಿಟಿವ್

0
1545

ಸನ್ಮಾರ್ಗ ವಾರ್ತೆ

ಕೊರೋನಾ ಗಡಿಗಳ ಹಂಗಿಲ್ಲದೆ ಹರಡುತ್ತಿದೆ. ಇಸ್ರೇಲನ್ನೂ ಈ ವೈರಸ್ ಬಿಟ್ಟಿಲ್ಲ. ಫೆಲೆಸ್ತೀನಿಯರನ್ನೂ ಈ ವೈರಸ್ ಕಾಡುತ್ತಿದೆ. ಈ ವರೆಗೆ ಇಸ್ರೇಲ್ ನಲ್ಲಿ 4,347 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ ಮತ್ತು 95 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಇದೇವೇಳೆ, ಪಶ್ಚಿಮ ದಂಡೆಯಲ್ಲಿ ಇದುವರೆಗೆ 100 ಪ್ರಕರಣಗಳು ಪತ್ತೆಯಾಗಿವೆ. 60 ರ ಹರೆಯದ ಓರ್ವ ಮಹಿಳೆ ಮೃತಪತ್ತಿದ್ದಾರೆ. ಫೆಲೆಸ್ತೀನಿ ಪ್ರಧಾನಿಯವರು ಭಾನುವಾರ ರಾತ್ರಿಯಿಂದ ಲಾಕ್ ಡೌನ್ ಘೋಷಿಸಿದ್ದಾರೆ. ಗಾಝದಲ್ಲಿ ಒಂಬತ್ತು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ಹಾಗೆಯೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹಾಯಕರೊಬ್ಬರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ನೆತನ್ಯಾಹು ಅವರಿಗೂ ಸೋಂಕು ತಗುಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.