ಕರ್ನಾಟಕದ ಬಿಗಿ ನಿಲುವು: ಮಧ್ಯಪ್ರವೇಶ ಕೋರಿ ಕೇರಳ ಮುಖ್ಯಮಂತ್ರಿಯಿಂದ ಪ್ರಧಾನಿಗೆ ಎರಡನೇ ಪತ್ರ

0
782

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಮಾ. 30: ಕರ್ನಾಟಕ್ಕೆ ಹೋಗುವ ಗಡಿಯನ್ನು ಪೊಲೀಸರು ಬಂದ್ ಮಾಡಿರುವುದನ್ನು ಪ್ರಧಾನಿಯ ಗಮನಕ್ಕೆ ತಂದು ಕೇರಳ ಮುಖ್ಯಮಂತ್ರಿ ಮತ್ತೊಂದು ಪತ್ರವನ್ನು ಬರೆದಿದ್ದಾರೆ. ರವಿವಾರ ಗಡಿ ತೆರೆಯಲು ಕರ್ನಾಟಕ ಸರಕಾರ ಸಿದ್ಧವಾಗಿಲ್ಲ. ಚಿಕಿತ್ಸೆ ಸಿಗದೆ ರೋಗಿ ಮೃತಪಟ್ಟಿದ್ದನ್ನು ಸೂಚಿಸಿ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ. ಇಡೀ ದೇಶ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಮತ್ತು ಪಕ್ಷಪಾತಿತ್ವದ ಹಿತಾಸಕ್ತಿ ದೇಶದ ಹಿತಾಸಕ್ತಿಗೆ ವಿರುದ್ಧ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಪ್ರಧಾನಿಗೆ ನೆನಪಿಸಿದ್ದಾರೆ. ಮಾರ್ಚ್ 27ಕ್ಕೆ ಪಿಣರಾಯಿ ವಿಜಯನ್ ಮೊದಲ ಪತ್ರ ಬರೆದಿದ್ದರು.

ಕೇರಳದಲ್ಲಿ ಕಂಡು ಬಂದ ಕೊರೊನಾ ಪ್ರಕರಣದಲ್ಲಿ ಹೆಚ್ಚಿನವು ಬಹುತೇಕ ಗಡಿ ಜಿಲ್ಲೆಯಲ್ಲಿ ಕಂಡು ಬಂದಿವೆ ಎಂದು ಕರ್ನಾಟಕ ಪೊಲೀಸರು ಸಂಚಾರ ನಿಯಂತ್ರಣ ಹೇರುತ್ತಿದ್ದಾರೆ. ಕರ್ನಾಟಕದ ವಾದ ಸತ್ಯಕ್ಕೆ ದೂರವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ.

ಕೇರಳದಲ್ಲಿ ಮತ್ತು ಒಟ್ಟಾರೆ ಗಡಿ ಜಿಲ್ಲೆಗಳಲ್ಲಿ ವಿದೇಶದಿಂದ ಬಂದವರಿಂದ ಕೊರೊನಾ ಹಬ್ಬಿದ್ದು, ಸಾಮೂಹಿಕವಾಗಿ ಹರಡದಂತೆ ಸರಕಾರ ಫಲಪ್ರವವಾದ ಕ್ರಮಗಳನ್ನು ಸ್ವೀಕರಿಸಿದೆ. ಕೇರಳದ ಕೆಲವು ಜಿಲ್ಲೆಗಳನ್ನು ಕೊರೊನ ಪೀಡಿತ ಜಿಲ್ಲೆಗಳಾಗಿ ಚಿತ್ರಿಸಿದ್ದು ಸತ್ಯಕ್ಕೆ ದೂರವಾಗಿದೆ. ಮುನ್ನೆಚ್ಚರಿಕೆಯ ಭಾಗವಾಗಿ ಹಲವು ಮಂದಿಯನ್ನು ನಿಗಾದಲ್ಲಿ ಮತ್ತು ಐಸೊಲೇಶನ್‍ನಲ್ಲಿ ಇರಿಸಲಾಗಿದೆ. ಇದರರ್ಥ ಎಲ್ಲರೂ ಕೊರೊನ ಪೀಡಿತರೆಂದು ಅಲ್ಲ. ದೇಶೀಯ ಲಾಕ್ ಡೌನ್ ಕಾಲದಲ್ಲಿ ಜನರ ದೊಡ್ಡ ಮಟ್ಟದ ಯಾತ್ರೆ ತಡೆಯಬೇಕಾಗಿದೆ.

ಆದರೆ, ಕರ್ನಾಟಕ ಪೊಲೀಸರು ಗಡಿಯಲ್ಲಿ ಆವಶ್ಯಕ ವಸ್ತುಗಳ ಸರಕು ಸಾಗಾಟವನ್ನೂ ತಡೆಯುತ್ತಿದ್ದಾರೆ. ಬದಲಿ ದಾರಿಯಾಗಿ ಗುಂಡಲಪೇಟೆಗೆ ಸರಕು ಸಾಗಾಟವನ್ನು ರಾತ್ರೆಯ ವೇಳೆ ತಡೆಯಲಾಗುತ್ತಿದೆ. ತಲಪಾಡಿಯ ಸಮೀಪದ ಮಂಗಳೂರಿನ ಗಡಿಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಒಬ್ಬ ರೋಗಿ ಮೃತಪಟ್ಟಿದ್ದಾರೆ. ಈ ಪರಿಸ್ಥಿತಿಯಲ್ಲಿ ಕೇರಳ-ಕರ್ನಾಟಕ ಗಡಿ ಮುಚ್ಚಬಾರದು ಮತ್ತು ಪ್ರಧಾನಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.