ಅಮೇರಿಕಾದಲ್ಲಿ ಕೊರೋನಾ ಅಟ್ಟಹಾಸ: ಒಂದೇ ದಿನದಲ್ಲಿ 2333 ಜನರ ಸಾವು

0
610

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಮೇ,6: ಅಮೆರಿಕಾದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನ ಬರೋಬ್ಬರಿ 2,333 ಮಂದಿಯನ್ನು ವೈರಸ್ ಬಲಿಪಡೆದುಕೊಂಡಿದೆ ಎಂದು ಎಎನ್‌ಐ ವರದಿ ಮಾಡಿದೆ.

ಈವರೆಗೂ ಅಮೆರಿಕಾದಲ್ಲಿ 71,022 ಮಂದಿ ಬಲಿಯಾಗಿದ್ದು, ಸೋಮವಾರವಷ್ಟೇ ಅಮೆರಿಕಾದಲ್ಲಿ 1,015 ಮಂದಿ ಬಲಿಯಾಗಿದ್ದರು.

ಅಮೆರಿಕಾ ರಾಷ್ಟ್ರದಲ್ಲಿ ವೈರಸ್ ನಿಯಂತ್ರಣಕ್ಕೆ ಬರುತ್ತಿದೆ ಎಂಬ ಭರವಸೆ ಜನರಲ್ಲಿ ಮೂಡುತ್ತಿರುವಾಗಲೇ ಇದೀಗ ಮತ್ತೆ ಅಮೆರಿಕಾದಲ್ಲಿ ಮಹಾಮಾರಿ 2,333 ಜನರು ಮೃತರಾಗಿರುವುದು ಜನತೆಯಲ್ಲಿ ವೈರಸ್ ಸೋಂಕಿನ ಕುರಿತಾದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಓದುಗರೇ, ಸನ್ಮಾರ್ಗ ಪೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ