ದೇಶದಲ್ಲಿ ಪೂರ್ವ ಸಿದ್ಧತೆಯಿಲ್ಲದೇ ಲಾಕ್‌ಡೌನ್ ಘೋಷಿಸಿದ್ದು ಕೊರೋನ ಸಾಮೂಹಿಕ ಹರಡುವಿಕೆ ಕಾರಣ: ತಜ್ಞರು

0
889

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.1: ದೇಶದಲ್ಲಿ ಹಲವು ಕಡೆಗಳಲ್ಲಿ ಕೊರೋನ ಸಾಮೂಹಿಕ ಹರಡುವಿಕೆ ಆರಂಭವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ಕೇಂದ್ರ ಸರಕಾರ ಇದನ್ನು ಒಪ್ಪುವುದಿಲ್ಲ. ಭಾರತದ ಪಬ್ಲಿಕ್ ಹೆಲ್ತ್ ಅಸೋಸಿಯೇಶನ್, ಇಂಡಿಯನ್ ಅಸೋಸಿಯೇಶನ್ ಆಫ್ ಎಪಿಡೊಮಾಲಜಿಸ್ಟ್ ಎಂಬ ಸಂಘಟನೆಗಳು ಜಂಟಿಯಾಗಿ “ಕೊರೋನ ಸಾಮೂಹಿಕ ಹರಡುವಿಕೆ ಶುರುವಾಗಿದೆ” ಎಂದು ಹೇಳಿಕೆ ನೀಡಿದೆ.

ದೇಶದಲ್ಲಿ ಕೊರೋನ ಹರಡಿದ್ದು, ವ್ಯಾಧಿಗಳನ್ನು ನಿಭಾಯಿಸುವ ದೀರ್ಘಕಾಲಿಕ ಅನುಭವಿಗಳ ಅಭಿಪ್ರಾಯ ಕೇಳದೆ ಸರಕಾರ ತೀರ್ಮಾನಿಸಿದ್ದರಿಂದಾಗಿದೆ ಎಂದು ಅವು ದೂರಿವೆ. ಸಾಂಕ್ರಾಮಿಕ ರೋಗಗಳ ನಿವಾರಣೆಯಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡವರು ಸರಕಾರಕ್ಕೆ ಸಲಹೆ ನೀಡಿದ್ದರು.

ಯಾವುದೇ ಸಿದ್ಧತೆ ಮಾಡದೆ ಸಂಪೂರ್ಣ ಲಾಕ್‌ಡೌನ್ ಮಾಡಿದುದೇ ಕೊರೋನಾ ಸಾಮೂಹಿಕ ಹರಡುವಿಕೆಗೆ ತಿರುಗೇಟಾಯಿತು. ವಲಸೆ ಕಾರ್ಮಿಕರಿಗೆ ಅಲ್ಲಲ್ಲಿ ಸಿಕ್ಕಿಹಾಕಿಕೊಂಡರು. ಆಹಾರ-ನೀರು ಇಲ್ಲದೆ ನಡೆದು ಊರಿಗೆ ಹೋದವರಲ್ಲಿ ಹಲವರು ಅವಗಢದಿಂದ ಮೃತಪಟ್ಟರು ಎಂದು ತಜ್ಞರು ಸರಕಾದ ನೀತಿಯನ್ನು ವಿಮರ್ಶಿಸಿದರು.

ಮುಂಬೈ ದೆಹಲಿ ಸಹಿತ ಹಲವು ರಾಜ್ಯಗಳಿಂದ ಜನರು ಆಯಾ ಊರಿಗೆ ತಲುಪಿಸುವ ಕೆಲಸಕ್ಕೆ ಕೇಂದ್ರ ಸರಕಾರ ತಯಾರಾಗಿದ್ದು ಎರಡನೆಯ ಹಂತದ ಲಾಕ್‍ಡೌನ್‍ಗಳ ನಂತರವಾಗಿದೆ. ಅಷ್ಟರಲ್ಲಿ ಹೆಚ್ಚು ರೋಗದ ಹರಡಿವಿಕೆಯು ಆರಂಭವಾಗಿತ್ತು. ಇದರೊಂದಿಗೆ ರೋಗ ಬಾಧೆಯಿರುವವರು ವಿವಿಧ ಸ್ಥಳಕ್ಕೆ ಹೋದುದು ರೋಗ ಹರಡುವಿಕೆಗೆ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇ‌ಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.