ಶಬರಿಮಲೆ ಪ್ರಕರಣ ಮಹಿಳಾ ಪ್ರವೇಶಕ್ಕೆ ತಡೆಯಾಜ್ಞೆಯಿಲ್ಲ: ಸಂವಿಧಾನ ಪೀಠದಿಂದ ಮರುಪರಿಶೀಲನೆ

0
560

ಹೊಸದಿಲ್ಲಿ, ನ.14: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ತೀರ್ಪು ನೀಡಿದ್ದ ಚೀಫ್ ಜಸ್ಟಿಸ್ ದೀಪಕ್ ಮಿಶ್ರ ಅಧ್ಯಕ್ಷತೆಯ ಪೀಠದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟು ವಿಶಾಲ ಪೀಠಕ್ಕೊಪ್ಪಿಸಿದೆ. ಏಳುಮಂದಿ ಸದಸ್ಯರಿರುವ ಪೀಠದಿಂದ ಆ ತೀರ್ಪಿನ ಮರುಪರಿಶೀಲನೆ ನಡೆಯಲಿದೆ.

ಇದೇ ವೇಳೆ ಚೀಫ್ ಜಸ್ಟಿಸ್ ದೀಪಕ್ ಮಿಶ್ರ ಅಧ್ಯಕ್ಷತೆಯ ಸಂವಿಧಾನ ಪೀಠ 2018ರಲ್ಲಿ ನೀಡಿದ್ದ ತೀರ್ಪಿಗೆ ತಡೆ ನೀಡಲು ಕೋರ್ಟು ನಿರಾಕರಿಸಿದೆ. ಶಬರಿಮಲೆ ದೇವಸ್ಥಾನಕ್ಕೆ ಹತ್ತರಿಂದ 50 ವರ್ಷದ ಮಹಿಳೆಯರು ಪ್ರವೇಶಿಸಲು ಇದ್ದ ನಿಷೇಧವನ್ನು ತೆರವುಗೊಳಿಸಿದ್ದ ತೀರ್ಪು ಮುಂದುವರಿಯಲಿದೆ. ಮರುಪರಿಶೀಲನಾ ಅರ್ಜಿಯ ವಾದವನ್ನ ಆಲಿಸಿ ಒಂಬತ್ತು ತಿಂಗಳು ಎಂಟು ದಿವಸದ ಬಳಿಕ ಕೋರ್ಟು ಈ ಮರುಪರಿಶೀಲನೆ ಕುರಿತ ತೀರ್ಪು ಪ್ರಕಟಿಸಿತು. ಫೆಬ್ರುವರಿ ಆರರಂದು ವಾದವನ್ನು ಆಲಿಸಲಾಗಿತ್ತು. ಐವತ್ತಾರು ಮರುಪರಿಶೀಲನಾ ಅರ್ಜಿಗಳು ದಾಖಲಾಗಿದ್ದವು.