ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜು. 9: ಭಾರತ ಬಯೊಟೆಕ್ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಕೊರೊನ ವ್ಯಾಕ್ಸಿನ್ ಕೊವಾಕ್ಸಿನ್‍ನ ಕ್ಲಿನಿಕಲ್ ಪರೀಕ್ಷೆ ಮಂಗಳವಾರ ಹೈದರಾಬಾದಿನ ನಿಮ್ಸ್‌ನಲ್ಲಿ ಆರಂಭವಾಗಿದೆ. ನಿಝಾಮ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ನಿಮ್ಸ್)ನಲ್ಲಿ ಪರೀಕ್ಷೆ ನಡೆಯುತ್ತಿದ್ದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ನ ಅನುಮತಿ ಲಭಿಸಿದ ಹನ್ನೆರಡು ರಾಜ್ಯಗಳಲ್ಲಿ ನಿಮ್ಸ್ ಕೂಡ ಒಂದು.
ಪಟ್ನಾದ ಆಲ್ ಇಂಡಿಯಾ ಮೆಡಿಕಲ್ ಇನ್ಸಿಟಿಟ್ಯೂಟ್‍ನಲ್ಲಿ ಶುಕ್ರವಾರ 100 ಮಂದಿಯ ಮೇಲೆ ಪರೀಕ್ಷೆ ಆರಂಭವಾಗಲಿದೆ. ಐಸಿಎಂಆರ್‍ನ ಪುಣೆಯ ವೈರಾಲಜಿ ಇನ್‌ಸ್ಟಿಟ್ಯೂಟ್ ರೋಗಿಗಳ ಸ್ಯಾಂಪಲ್‍ಗಳಿಂದ ಸಂಗ್ರಹಿಸಿದ ಕೊರೋನ 19ರ ಕೋಶಗಳ ಘಟಕಗಳನ್ನು ಉಪಯೋಗಿಸಿ ಭಾರತ್ ಬಯೊಟೆಕ್ ಬಿಬಿವಿ152 ಕೊರೋನ ವ್ಯಾಕ್ಸಿನ್ ಅಭಿವೃದ್ದಿ ಪಡಿಸಿದೆ.
ಕ್ಲಿನಿಕಲ್ ಪ್ರಯೋಗಗಳಲ್ಲಿ ಪರಿಚಿತರಾದ ತಜ್ಞರನ್ನು ತಂಡದಲ್ಲಿ ಸೇರಿಸಲಾಗಿದೆ ಎಂದು ಆದ್ಯ ಘಟ್ಟದ ಟ್ರಯಲ್‍ಗೆ ನೋಂದಣಿ ಆರಂಭವಾಗಿದೆ ಎಂದು ಪಟ್ನಾ ಏಮ್ಸ್ ಮುಖ್ಯಸ್ಥ ಡಾ.ಸಿಎಂ ಸಿಂಗ್ ಹೇಳಿದರು. ಮೊದಲ ಘಟ್ಟ ಪೂರ್ತಿಯಾಗಲು 28 ದಿವಸ ಬೇಕು. ಮನುಷ್ಯರಲ್ಲಿ ಪ್ರಯೋಗ ಪೂರ್ತಿಯಾಗಲು ಆರರಿಂದ ಎಂಟು ತಿಂಗಳು ಬೇಕು. ಕ್ಲಿನಿಕಲ್ ಟ್ರಯಲ್‍ಗೆ ಹೆಚ್ಚು ಜನರು ಸ್ವಯಂ ಸಿದ್ಧವಾಗಿ ಮುಂದೆ ಬಂದಿದ್ದಾರೆ. ಆದ್ದರಿಂದ ಪರೀಕ್ಷೆ ಮಾಡುವುದರ ಸಂಖ್ಯೆಯೂ ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ.
ಮೊದಲ ಹಂತದ ಫಲಿತಾಂಶ ನೋಡಿ ಇತರ ಹಂತಗಳಿಗೆ ಹೋಗಬೇಕಾಗಿದೆ. ಮನುಷ್ಯರಲ್ಲಿ ಪ್ರಯೋಗ ಮಾಡುವ ಸಿದ್ಧತೆಗಳು ವೇಗದಲ್ಲಿ ಪೂರ್ತಿಗೊಳಿಸಲಾಗಿದೆ. ದಿಲ್ಲಿ, ವಿಶಾಖ ಪಟ್ಟಣ, ರೊಹಟಕ್, ಪಟ್ನಾ , ಬೆಂಗಳೂರು, ನಾಗಪುರ ಗೊರಕಪುರ,ಹೈದರಾಬಾದ್ ಆರ್ಯನಗರ, ಕಾನ್‍ಪುರ, ಗೋವ ಕಾಟನ್ ಕುಳಂಗಳ್ ಇತ್ಯಾದಿಯಾಗಿ ಹನ್ನೆರಡು ರಾಜ್ಯಗಳಲ್ಲಿ ಕ್ಲಿನಿಕಲ್ ಪರೀಕ್ಷೆಗಾಗಿ ಹೊಣೆ ವಹಿಸಿಕೊಡಲಾಗಿದೆ.
ಆಗಸ್ಟ್ 15ರೊಳಗೆ ವ್ಯಾಕ್ಸಿನಲ್ ಹೊರ ತರುವ ಯತ್ನವೂ ನಮ್ಮದೆಂದು ಐಸಿಎಂ ಆರ್ ಪ್ರಧಾನ ನಿರ್ದೇಶಕ ಬಲ್‍ರಾಮ ಭಾರ್ಗವ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












