ಸನ್ಮಾರ್ಗ ವಾರ್ತೆ
ಕೊಲ್ಕತಾ,ಜು.9: ಪ್ರಜಾಪ್ರಭುತ್ವ, ಜಾತ್ಯತೀತತೆ, ಪೌರತ್ವ ಮೊದಲಾದ ವಿಷಯಗಳನ್ನು ಸಿಬಿಎಸ್ಇ ಸಿಲೆಬಸ್ನಿಂದ ತೆಗೆದು ಹಾಕಿದ ಸರಕಾರದ ಕ್ರಮವು ನಡುಕು ಸೃಷ್ಟಿಸಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಈ ಕ್ರಮವನ್ನು ತಾನು ಬಲವಾಗಿ ವಿರೋದಿಸುತ್ತೇನೆ ಎಂದು ಅವರು ಹೇಳಿದ್ದು, ಕೊರೋನ ಹರಡುತ್ತಿರುವ ಸ್ಥಿತಿಯಲ್ಲಿ ಪಾಠದೊತ್ತಡ ಕಡಿಮೆ ಮಾಡುವ ನೆಪದಲ್ಲಿ ಪೌರತ್ವ, ಫೆಡರಿಲಿಸಂ, ಜಾತ್ಯತೀತತೆ, ವಿಭಜನೆ ಮೊದಲಾದ ವಿಷಯಗಳನ್ನು ತೆಗೆದು ಹಾಕಿದ್ದು ಆತಂಕ ಮೂಡಿಸಿದೆ. ಬಲವಾದ ವಿರೋಧವನ್ನು ತಿಳಿಸುವುದರೊಂದಿಗೆ ಈ ವಿಷಯದಲ್ಲಿ ಪಠ್ಯ ಕ್ರಮವನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಮಮತಾ ಟ್ವೀಟ್ ಮಾಡಿದರು.
ಮಂಗಳವಾರ ಸಿಬಿಎಸ್ಇ ಸಿಲಬಸ್ ಶೇ.30ಕ್ಕಿಳಿಸಿ ಘೋಷಣೆ ಹೊರಡಿಸಿದೆ. ಇದರ ಭಾಗವಾಗಿ ಒಂಬತ್ತನೆ ತರಗತಿಯಿಂದ ಹನ್ನೆರಡನೆ ಕ್ಲಾಸಿನವರೆಗಿನ ಇಕಾನಾಮಿಕ್ಸ್, ಪೊಲಿಟಿಕಲ್ ಸೈನ್ಸ್ ಸಿಲಬಸ್ನಿಂದ ಪ್ರಜಾಪ್ರಭುತ್ವದ ಹಕ್ಕುಗಳು, ಜಾತ್ಯತೀತತೆ, ಫೆಡರಿಲಿಸಂ ಸಾಮಾಜಿಕ ಮುನ್ನಡೆಗಳು, ಆಹಾರ ಸುರಕ್ಷೆ, ಜಾತಿ,ಧರ್ಮ,ಲಿಂಗ ಪ್ರಜಾಪ್ರಭುತ್ವ ವೈವಿಧ್ಯತೆಯ ಭಾಗಗಳನ್ನು ತೆಗೆದು ಹಾಕಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ












