24 ಗಂಟೆಗಳಲ್ಲಿ 24ಸಾವಿರಕ್ಕೂ ಅಧಿಕ ಜನರಿಗೆ ಕೊರೋನ ಸೋಂಕು: ದೇಶದಲ್ಲಿ 7 ಲಕ್ಷ ಸೋಂಕಿತರು

0
337

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.6: ದೇಶದಲ್ಲಿ 24 ಗಂಟೆಗಳಲ್ಲಿ 24,248 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಒಟ್ಟು ರೋಗಿಗಳ ಸಂಖ್ಯೆ 6,97,413ಕ್ಕೆ ಏರಿದೆ. ನಿನ್ನೆ 425 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 2,53,287 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. 4,24,432 ಮಂದಿ ರೋಗದ ಕಬಂಧ ಬಾಹುವಿನಿಂದ ಹೊರಬಂದಿದ್ದಾರೆ. ಒಟ್ಟು 19,693 ಮಂದಿ ಕೊರೊನಕ್ಕೆ ದೇಶದಲ್ಲಿ ಬಲಿಯಾಗಿದ್ದಾರೆ.

2,06,619 ರೋಗಿಗಳು ಮಹಾರಾಷ್ಟ್ರದಲ್ಲಿದ್ದಾರೆ. 8,822ಮಂದಿ ಇಲ್ಲಿ ಮೃತಪಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿರುವ ತಮಿಳ್ನಾಡಿನಲ್ಲಿ 1,11,151 ಮಂದಿ ಕೊರೋನಾ ಸೋಂಕಿತರಿದ್ದು, 1510 ಮಂದಿ ಮೃತಪಟ್ಟಿರುವರು.

ದಿಲ್ಲಿಯಲ್ಲಿ 99,444 ಮಂದಿಗೆ ಕೊರೋನ ಸೋಂಕು ತಗುಲಿದ್ದು, 3067 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 99,69,662 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಲಾಗಿದ್ದು, ರವಿವಾರ 1,80,596 ಸ್ಯಾಂಪಲ್‍ಗಳ ಪರೀಕ್ಷೆ ನಡೆಯಿತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.