ಒಂದೇ ದಿನದಲ್ಲಿ 18,563 ಜನರಿಗೆ ಕೊರೋನ ಸೋಂಕು ದೃಢ; 503 ಮಂದಿ ಸಾವು

0
373

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.1: ದೇಶದಲ್ಲಿ 24 ಗಂಟೆಗಳಲ್ಲಿ 18,563 ಮಂದಿಗೆ ಕೊರೊನ ದೃಢಪಟ್ಟಿದ್ದು 503 ಮಂದಿ ಮೃತಪಟ್ಟಿದ್ದಾರೆ. 17,400 ಮಂದಿ ಇದುವರೆಗೆ ದೇಶದಲ್ಲಿ ಕೊರೋನಕ್ಕೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈಗ 2,20,114 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3,47,979 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ 86 ಲಕ್ಷ ಮಂದಿ ಕೊರೋನ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದು ಐಸಿಎಂಆರ್ ತಿಳಿಸಿದೆ. 24 ಗಂಟೆಗಳಲ್ಲಿ 2,17,931ಜನರನ್ನು‌ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ.

1,74,761 ಮಂದಿಗೆ ಕೊರೋನ ದೃಢಪಟಿರುವ ಮಹಾರಾಷ್ಟ್ರವು ಹೆಚ್ಚು ಕೊರೋನ ರೋಗಿಗಳನ್ನು ಹೊಂದಿರುವ ರಾಜ್ಯವಾಗಿದೆ, ತಮಿಳ್ನಾಡು ಮುಂತಾದೆಡೆ ಕೊರೋನ ಬಾಧೆ ಚಿಂತಾಜನಕ ಸ್ಥಿತಿಯಲ್ಲಿ ವ್ಯಾಪಿಸಿದೆ. ಇದೇ ವೇಳೆ ಕೇಂದ್ರ ಸರಕಾರದ ಲಾಕ್ ಡೌನ್ ಸಡಿಲಿಕೆಯ ಎರಡನೆ ಘಟ್ಟ ಇಂದು ಜಾರಿಗೆ ಬರಲಿದೆ. ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ಸೇವೆ ಇಲ್ಲದಿದ್ದರ, ರಾತ್ರೆಯ ಕಫ್ರ್ಯೂವಿನ ಸಮಯ ಹತ್ತು ಗಂಟೆಯಿಂದ ಬೆಳಗ್ಗೆ ಐದು ಗಂಟೆಯವರೆ ಮಾಡಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.