ಕೊರೋನ: ಅಮೆರಿಕದಲ್ಲಿ 1ಲಕ್ಷ ದಾಟಿದ ಮೃತರ ಸಂಖ್ಯೆ

0
496

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಮೇ.27: ಅಮೆರಿಕದಲ್ಲಿ ಕೊರೋನ ಪೀಡಿತರ ಸಾವಿನ ಸಂಖ್ಯೆ ಒಂದು ಲಕ್ಷ ದಾಟಿದೆ. 1,00,579 ಜನರು ಅಮೆರಿಕದಲ್ಲಿ ಕೊರೋನಕ್ಕೆ ಬಲಿಯಾಗಿದ್ದಾರೆ. 11,44,579 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 17,158 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 479,969 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.

ಜಗತ್ತಿನಲ್ಲಿ ಒಟ್ಟು ಮೂರು ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ನ್ಯೂಯಾರ್ಕ್ ನಗರದಲ್ಲಿಯೇ ಅತೀ ಹೆಚ್ಚು ಮಂದಿ ಕೊರೊನಾಕ್ಕೆ ಬಲಿಯಾಗಿದ್ದು ಇದುವರೆಗೆ 29,451 ಮಂದಿ ಸಾವನ್ನಪ್ಪಿದ್ದಾರೆ. ನ್ಯೂಜೆರ್ಸಿಯಲ್ಲಿ 11,197 ಮೆಸಾಚ್ಯೂಟ್ಸ್‍ನಲ್ಲಿ 6473, ಪೆನ್ಸಿಲ್ವೇನಿಯದಲ್ಲಿ 5194, ಮಿಷಿಗನ್‍ನಲ್ಲಿ 5266, ಕ್ಯಾಲಿಫೋರ್ನಿಯದಲ್ಲಿ 3852 ಹಾಗು ಕನಕ್ಟಿಕಟ್‍ನಲ್ಲಿ 3769 ಮಂದಿ ಕೊರೋನಕ್ಕೆ ಬಲಿಯಾದರು.

ಇದೇ ವೇಳೆ 24 ಗಂಟೆಗಳಲ್ಲಿ ಅತಿಹೆಚ್ಚು ಕೊರೋನ ಪೀಡಿತರು ಮೃತಪಡುತ್ತಿರುವ ದೇಶವಾಗಿ ಬ್ರೆಝಲ್ ಬದಲಾಗಿದೆ. ಕಳೆದ ದಿವಸ 807ಮಂದಿ ಬ್ರಿಝಿಲ್‍ನಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ಇಲ್ಲಿ ಒಂದೇ ದಿವಸ 620 ಮಂದಿ ಅಮೆರಿಕದಲ್ಲಿ ಮೃತಪಟ್ಟಿದ್ದರು. ಕೊರೋನ ಪೀಡಿತರ ಸಂಖ್ಯೆಯಲ್ಲಿ ಅಮೆರಿಕದ ನಂತರ ಎರಡನೆ ಸ್ಥಾನದಲ್ಲಿ ಬ್ರೆಝಿಲ್ ಇದ್ದು 3,92,360 ಕೊರೋನ ಪ್ರಕರಣಗಳಿದ್ದು, 24,549 ರೋಗಿಗಳು ಮೃತಪಟ್ಟಿದ್ದಾರೆ.