ಸನ್ಮಾರ್ಗ ವಾರ್ತೆ
ನವದೆಹಲಿ,ಮೇ.27: ದೇಶದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ 1.5 ಲಕ್ಷ ಮೀರಿದೆ. ಕಳೆದ 24 ಗಂಟೆಗಳಲ್ಲಿ 6,387 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 170 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಇದರೊಂದಿಗೆ ಮೃತರ ಸಂಖ್ಯೆಯು 4,337ಕ್ಕೆ ಏರಿಕೆಯಾಗಿದೆ.
Covid19.Org ಮತ್ತು ರಾಜ್ಯ ಸರ್ಕಾರಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ಬುಧವಾರ ಬೆಳಿಗ್ಗೆ ತನಕ 1,51,969 ಸೋಂಕು ಪ್ರಕರಣಗಳು ವರದಿಯಾಗಿವೆ. ಮಂಗಳವಾರ ಮಹಾರಾಷ್ಟ್ರದಲ್ಲಿ 2091, ತಮಿಳುನಾಡಿನಲ್ಲಿ 646, ಗುಜರಾತ್ನಲ್ಲಿ 361, ದೆಹಲಿಯಲ್ಲಿ 412 ಮತ್ತು ಮಧ್ಯಪ್ರದೇಶದಲ್ಲಿ 165 ಸೋಂಕು ತಗುಲಿದೆ.












