ದೇಶದಲ್ಲಿ ಕೊರೋನ ಹರಡುವಿಕೆ ನವೆಂಬರಿನಲ್ಲಿ ಏರುಗತಿ- ಅಧ್ಯಯನ ವರದಿ

0
425

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.15: ಭಾರತದಲ್ಲಿ ಕೊರೋನ ನವೆಂಬರ್ ವೇಳೆಗೆ ತಾರಕಕ್ಕೇರಲಿದೆ ಎಂದು ಎಂದು ಅಧ್ಯಯನವೊಂದು ತಿಳಿಸಿದೆ. ನವೆಂಬರ್ ಅರ್ಧಕ್ಕಾಗುವಾಗ ಐಸಿಯು, ವೆಂಟಿಲೇಟರ್ ಲಭ್ಯತೆ ಕಡಿಮೆಯಾಗಲಿದೆ ಎಂದು ಐಸಿಎಂಆರ್ ಆಪರೇಶನ್ಸ್ ರಿಸರ್ಚ್ ಗ್ರೂಪ್‍ನ ಸಂಶೋಧಕರ ಅಧ್ಯಯನವು ತಿಳಿಸುತ್ತಿದೆ.

ಲಾಕ್‍ಡೌನ್ ರೋಗ ಹರಡುವುದನ್ನು ತೀವ್ರಗೊಳಿಸದಂತೆ 34ರಿಂದ 76 ದಿವಸಗಳವರೆಗೆ ವಿಳಂಬಗೊಳಿಸಿದೆ. ಈ ಅವಧಿಯಲ್ಲಿ ರೋಗಬಾಧೆಯನ್ನು ಶೇ69ರಿಂದ ಶೇ. 97ರವರೆಗೂ ತಡೆಯಲು ಸಹಾಯಕವಾಗಿದೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬೇಕಾದಷ್ಟು ಸಿದ್ಧತೆಗಳನ್ನು ಮಾಡಲು ಲಾಕ್‍ಡೌನ್ ಸಹಾಯಕವಾಗಿದೆ ಎಂದು ಐಸಿಎಂಆರ್ ಅಧ್ಯಯನ ಹೇಳುತ್ತಿದೆ.

ಲಾಕ್ ಡೌನ್‍ನ ನಂತರ ಶೇ. 60ರಷ್ಟು ಸಾರ್ವಜನಿಕ ಆರೋಗ್ಯ ಕ್ರಮಗಳು ಬಲಗೊಳಿಸಿದ್ದರಿಂದ ನವೆಂಬರ್ ಆರಂಭದಲ್ಲಿ ಬೇಡಿಕೆಯನ್ನು ನಿರ್ವಹಿಸಲು ಸಾಧ್ಯವೂ ಆಗಲಿದೆ. ಆದರೆ,ತದನಂತರ ಐಸೊಲೇಶನ್ ಹಾಸಿಗೆಳು 5.4 ತಿಂಗಳು, ಐಸಿಯು ಹಾಸಿಗೆಗಳು 4.6 ತಿಂಗಳು ಮತ್ತು ವೆಂಟಿಲೇಟರ್ 3.9 ತಿಂಗಳವರೆಗೆ ಸಾಲವುದಿಲ್ಲ ಎಂದು ಅಧ್ಯಯನ ಮುನ್ನೆಚ್ಚರಿಕೆ ನೀಡದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.