ವಿಶ್ವದಲ್ಲಿ 80 ಲಕ್ಷ ಕೊರೋನ ಸೋಂಕಿತರು!

0
313

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜೂ.15: ವಿಶ್ವದಲ್ಲಿ ಕೊರೋನ ಪೀಡಿತರ ಸಂಖ್ಯೆ 80ಲಕ್ಷಕ್ಕೆ ತಲುಪುತ್ತಿದೆ. ಈಗ 79,97,084 ಜನರಿಗೆ ಕೊರೋನ ಸೋಂಕು ತಗುಲಿದೆ. ಇವರಲ್ಲಿ 4,35,662 ಮಂದಿ ಮೃತಪಟ್ಟಿದ್ದಾರೆ. 41,29,060 ಮಂದಿ ಗುಣಮುಖರಾಗಿದ್ದಾರೆ. ಹಾಗೂ, 34,32,362 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಮೆರಿಕದಲ್ಲಿ ಕೊರೋನ ಸೋಂಕು ಹರಡುವಿಕೆಯ ತೀವ್ರಗತಿ ಪಡೆದಿದೆ. ಇಲ್ಲಿ 21,16,228 ಮಂದಿಗೆ ರೋಗ ದೃಡಪಟ್ಟಿದ್ದು, 1,17,858 ಜನರು ಮೃತಪಟ್ಟಿದ್ದಾರೆ. 8,70,050 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. 11,74,320 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ 4,04,470 ಮಂದಿಗೆ ಕೊರೋನ ಸೋಂಕು ತಗುಲಿದದೆ. 30,911 ಜನರು ಮೃಪಟ್ಟಿದ್ದಾರೆ. 2,87,558 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಮೆರಿಕದ ನಂತರ ಬ್ರಝಿಲ್‌ನಲ್ಲಿ ಕೊರೋನ ವ್ಯಾಪಿಸಿದ್ದು, ಇಲ್ಲಿ 8,67,882 ಮಂದಿ ರೋಗ ಪೀಡಿತರಿದ್ದಾರೆ. ಇವರಲ್ಲಿ 4,53,568 ಮಂದಿ ಗುಣಮುಖರಾಗಿದ್ದಾರೆ. 43,389 ಮಂದಿ ಮೃತಪಟ್ಟಿದ್ದಾರೆ.ರಷ್ಯಾದಲ್ಲಿ 5,28,96 ಮಂದಿಗೆ ಸೋಂಕು ದೃಢಪಟ್ಟಿದೆ. 6,948 ಮಂದಿ ಮೃತಪಟ್ಟರು. 2,80,050 ಮಂದಿ ರೋಗದಿಂದ ಗುಣಮುಖಗೊಂಡಿದ್ದಾರೆ.

ಕೊರೋನ ಪೀಡಿತರ ಸಂಖ್ಯೆಯಲ್ಲಿ ರಷ್ಯದ ಹಿಂದೆ ನಾಲ್ಕನೆ ಸ್ಥಾನದಲ್ಲಿ ಭಾರತ ಇದೆ. ಇಲ್ಲಿ 3,32,424 ಮಂದಿಗೆ ರೋಗ ಕಂಡು ಬಂದಿದೆ. ಒಟ್ಟು 9,520 ಮಂದಿ ಮೃತಪಟ್ಟಿದ್ದಾರೆ. 1,53,106 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,69,797 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 11,502 ಮಂದಿಗೆ ಕೊರೋನ ದೃಢಪಟ್ಟಿದ್ದು, 325 ಮಂದಿ ಸಾವನ್ನಪ್ಪಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.