ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕಳೆದ ನಾಲ್ಕು ದಿನಗಳಿಂದ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,527 ಜನರಿಗೆ ಕೊರೋನ ಸೋಂಕು ತಗುಲಿದೆ. ಇದರೊಂದಿಗೆ ಕೊರೋನ ಸೊಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 15,079 ಏರಿಕೆಯಾಗಿದೆ. 1,656 ಮಂದಿ ಗುಣಮುಖರಾಗಿದ್ದಾರೆ. ಕೊರೋನ ಪಾಸಿಟಿವಿಟಿ ದರವು ಶೇ.0.56. ಆಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊರೋನ ಪುನಃ ಹೆಚ್ಚಳವಾಗುತ್ತಿರುವುದು ಮತ್ತು ಒಮಿಕ್ರಾನ್ ಹೊಸ ರೂಪಾಂತರ ಹರಡಿರುವುದರಿಂದ ದಿಲ್ಲಿಯ ಜನರಿಗೆ ಪುನಃ ಮಾಸ್ಕ್ ಕಡ್ಡಾಯಗೊಳಿಸಿ ಸರಕಾರ ಆದೇಶಿವಿತ್ತಿದೆ. ತಮಿಳ್ನಾಡು ಸರಕಾರ ಕೂಡ ಮಾಸ್ಕ್ ಕಡ್ಡಾಯಗೊಳಿಸಿದೆ. ಒಮಿಕ್ರಾನ್ನ ಹೊಸ ರೂಪಾಂತರವನ್ನು ಬಿಎ2.12 ಎಂದು ಹೆಸರಿಸಲಾಗಿದ್ದು ದಿಲ್ಲಿಯಲ್ಲಿ ಈ ರೂಪಾಂತರ ಕಂಡು ಬಂದಿದೆ ಎಂದು ದಿಲ್ಲಿಯ ಆರೋಗ್ಯ ಇಲಾಖೆಯೇ ತಿಳಿಸಿದೆ.
ಕೊರೊಇನ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳತ್ತ ಸರಕಾರ ಹೆಚ್ಚಿನ ಗಮನ ಹರಿಸಿದ್ದು ಇದಕ್ಕಾಗಿ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆಯನ್ನು ಕಡ್ಡಾಯಗೊಳಿಸುತ್ತಿದೆ.












