ಸಮಾಜದಲ್ಲಿ ಕೆಡುಕುಗಳು ಕಡಿಮೆಯಾಗಬೇಕ್ಕಿದ್ದರೆ ಅದರ ಪ್ರೇರಕ ಶಕ್ತಿಗಳನ್ನು ಇಲ್ಲವಾಗಿಸಬೇಕು: ಕೋಲಾರದಲ್ಲಿ ಸೌಹಾರ್ದ ಇಫ್ತಾರ್ ಕೂಟ

0
335

ಸನ್ಮಾರ್ಗ ವಾರ್ತೆ

ಕೋಲಾರ: “ಸಮಾಜದಲ್ಲಿ ಕೆಡುಕುಗಳು ಕಡಿಮೆಯಾಗಬೇಕ್ಕಿದ್ದರೆ ಅದರ ಪ್ರೇರಕ ಶಕ್ತಿಗಳನ್ನು ಇಲ್ಲವಾಗಿಸಬೇಕು” ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಜೊತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ಹೇಳಿದರು, ಅವರು ಸ್ಥಾನೀಯ ಅಂಜುಮನ್ ಇಸ್ಲಾಮಿಯಾ ಹಾಲ್ ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕೋಲಾರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಫಾದರ್ ಡಾ.ಡೆವಿಡ್ ಕ್ರಿಸ್ಟೋಫರ್ “ಮಾನವರ ಪರಿಪಾಲಕನೊಬ್ಬನೆ, ಅವನ ಸೃಷ್ಟಿಗಳಾದ ಮಾನವ ಕುಲದ ಏಳಿಗೆಗಾಗಿ ನಾವು ಪ್ರಯತ್ನಿಸಬೇಕು” ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಮುಬಾರಕ್ ಬಾಗ್ ಬಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ.ಇ.ಹಿಂದ್ ಸ್ಥಾನೀಯ ಅಧ್ಯಕ್ಷ ಅಮ್ಜದ್ ಅಲಿ ಪ್ರಾರಂಭದಲ್ಲಿ ಕುರ್ ಆನ್ ಪಠಿಸಿದರು. ನಫೀಸ್ ಬೇಗ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.ಪತ್ರಕರ್ತ ಶ್ರೀ ಕೆ.ಎಸ್. ಗಣೇಶ್, ವಲಯ ಸಂಚಾಲಕ ಸಯ್ಯದ್ ರುಹುಲ್ಲಾಹ್, ಮುಂದಾದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.