ಕೇಂದ್ರ ಸರಕಾರದ ಟೀಕೆ; ದೇಶ ತೊರೆಯಲು ನಿರ್ಬಂಧಿಸಲ್ಪಡುತ್ತಿದ್ದೇವೆ; ಫ್ರೆಂಚ್ ಪತ್ರಕರ್ತೆ

0
91

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ.17: ಓವರ್‍ಸೀಸ್ ಸಿಟಿಝನ್ ಆಫ್ ಇಂಡಿಯ ಒಸಿಐ ಕಾರ್ಡ್ ಹಿಂಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವಾಲಯ ಬೆದರಿಕೆ ಹಾಕಿದ ಬೆನ್ನಿಗೆ, ಭಾರತ ಬಿಟ್ಟು ಹೋಗಲು ನಿರ್ಬಂಧಿಸಲ್ಪಡುತ್ತಿದ್ದೇನೆ ಎಂದು ಫ್ರೆಂಚ್ ಪತ್ರಕರ್ತ ವನೇಶ್ ಡಂಗಕ್ ಹೇಳಿದರು.

ಎರಡು ದಶಕಗಳಿಂದ ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ದೇಶ ಬಿಡುವ ಪರಿಸ್ಥಿತಿ ನನ್ನ ಮುಂದಿದೆ. ಆದರೆ ಇದು ನನ್ನ ಆಯ್ಕೆ ಅಲ್ಲ. ಕೇಂದ್ರ ಸರಕಾರದ ಒತ್ತಡದಿಂದ ಅನಿವಾರ್ಯವಾಗಿದೆ ಎಂದು ಹೇಳಿದರು.

16 ತಿಂಗಳ ಹಿಂದೆ ಡಂಗಕ್‍ರಿಗೆ ದೇಶದಲ್ಲಿ ಕೆಲಸ ಮಾಡುವ ಹಕ್ಕನ್ನು ಕೇಂದ್ರ ಸರಕಾರ ನಿಷೇಧಿಸಿತ್ತು. ಇದರ ಬೆನ್ನಿಗೆ ಒಸಿಐ ಕಾರ್ಡ್ ಹಿಂಪಡೆಯುವುದಾಗಿ ಸರಕಾರ ತಿಳಿಸಿತು. ” ನಾನು ಮದುವೆಯಾದ್ದು, ನನ್ನ ಮಗನನ್ನು ಸಾಕಿ ಬೆಳೆಸಿದ ನನ್ನ ಮನೆ ಎಂದು ಕರೆಯಬಹುದಾದ ಸ್ಥಳವನ್ನು ಬಿಟ್ಟು ಹೋಗುವುದು ನನಗೆ ಎಂದೂ ಇಷ್ಟವಿಲ್ಲ. ಆದರೆ ನಾನು ಹಾಗೆ ಮಾಡುವುದಕ್ಕೆ ನಿರ್ಬಂಧಿತಳಾಗಿದ್ದೇನೆ ಎಂದು ಡಂಗಾಕ್ ಹೇಳಿದರು.

ಲೆ ಪಾಯಿಂಟ್, ಲಾ ಕ್ರೊಯಿಕ್ಸ್ ಸಹಿತ ಹಲವು ಫ್ರೆಂಚ್ ಮಾಧ್ಯಮಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. 23 ವರ್ಷದಿಂದ ಭಾರತದಲ್ಲಿ ವಾಸವಿದ್ದಾರೆ. ಭಾರತದ ಪ್ರಜೆಯನ್ನು ಅವರು ಮದುವೆಯಾಗಿದ್ದಾರೆ. 16 ತಿಂಗಳ ಹಿಂದೆ ಮಾಧ್ಯಮದವಳಾಗಿ ಕೆಲಸ ಮಾಡುವ ಹಕ್ಕನ್ನು ಕೇಂದ್ರ ಸರಕಾರ ನಿಷೇಧಿಸಿತು. ಸ್ಪಷ್ಟವಾದ ಕಾರಣವೊಂದು ಹೇಳಿಲ್ಲ. ಇದರ ಬಗ್ಗೆ ಸ್ಪಷ್ಟೀಕರಣ ಕೇಳಿದಾಗ ಗೃಹ ಸಚಿವಾಲಯ ಉತ್ತರಿಸಿಲ್ಲ.

ಡಂಗಕ್ ವರದಿಗಳು ಭಾರತದ ಸಾರ್ವಭೌಮತೆಗೆ ಅಖಂಡತೆಗೆ ವಿರುದ್ಧ ಎಂದು ಕಳೆದ ತಿಂಗಳು ಕೇಂದ್ರ ಗೃಹ ಸಚಿವಾಲಯ ಇವರಿಗೆ ನೋಟಿಸು ನೀಡಿತ್ತು. ಇವರ ಲೇಖನಗಳು ದೇಶದಲ್ಲಿನ ಶಾಂತಿ ಇಲ್ಲದಂತೆ ಮಾಡಿತೆಂದು ಸಚಿವಾಲಯ ಹೇಳಿತ್ತು.