ಅಮಾಯಕರಿಗೆ ತನಿಖೆಯ ಹೆಸರಲ್ಲಿ ಭಯೋತ್ಪಾದಕ ಪಟ್ಟ; ದಾರಿಮಿ ಉಲಮಾ ಒಕ್ಕೂಟ ಖಂಡನೆ

0
452

ಸನ್ಮಾರ್ಗ ವಾರ್ತೆ-

ಮಂಗಳೂರು, ಆ. 21- ಬೆಳ್ತಂಡಿಯ ಗೋವಿಂದೂರಿನ ಅಬ್ದುಲ್ ರವೂಫ್ ರ ಬಗ್ಗೆ ಸುದ್ದಿಮಾಧ್ಯಮಗಳು ಹರಡಿದ ಸುಳ್ಳು ಸುದ್ದಿಗಳ ವಿರುದ್ಧ ಮುಸ್ಲಿಂ ಸಮುದಾಯದೊಳಗೆ ತೀವ್ರ ಅಸಂತೋಷ ಮುಂದುವರಿದಿದ್ದು, ದಾರಿಮಿ ಉಲಮಾ ಒಕ್ಕೂಟವು ಖಂಡನೆ ವ್ಯಕ್ತಪಡಿಸಿದೆ.
ತನಿಖೆಯ ಹೆಸರಲ್ಲಿ ಅಮಾಯಕ ಯುವಕರಿಗೆ ಭಯೋತ್ಪಾದಕ ಪಟ್ಟ ಕಟ್ಟಿ ಒಂದು ಸಮುದಾಯವನ್ನು ಭಯದ ನೆರಳಲ್ಲಿ ಬದುಕುವಂತೆ ಮಾಡುತ್ತಿರುವ ಕೋಮು ಪ್ರೇರಿತ ಸರಕಾರಗಳ ಮತ್ತು ಮೀಡಿಯಾಗಳ ಕೃತ್ಯ ಖಂಡನೀಯವಾಗಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.

ಬೆಳ್ತಂಗಡಿಯ ರವೂಪ್ ಎಂಬ ಯುವಕನ ಬಗ್ಗೆ ಕಪೋಲ ಕಲ್ಪಿತ ವರದಿಗಳನ್ನು ಬಿತ್ತರಿಸುವ ಮೂಲಕ ಅಮಾನವೀಯವಾಗಿ ವರ್ತಿಸಿದ ಎಲೆಕ್ಟ್ರಾನಿಕ್ ಮೀಡಿಯಾಗಳ ಸಮೇತ ರಾಜ್ಯದ ಬಹುತೇಕ ಪತ್ರಿಕಾ ಮಾದ್ಯಮಗಳು ತಮ್ಮ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದು ಇದುವೇ ನಿಜವಾದ ಭಯೋತ್ಪಾದಕ ಕೃತ್ಯವಾಗಿದೆ ಎಂದು ದಾರಿಮಿ ಉಲಮಾ ಒಕ್ಕೂಟದ ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.