ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಆಗ್ರಹ: ನಿರಾಹಾರ ಸತ್ಯಾಗ್ರಹ

0
449

ಸನ್ಮಾರ್ಗ ವಾರ್ತೆ

ಹೈದರಾಬಾದ್,ಡಿ,24:ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಹೈದರಾಬಾದಿನ ಇಂದಿರಾ ಪಾರ್ಕಿನಲ್ಲಿ ನಿರಾಹಾರ ಸತ್ಯಾಗ್ರಹವನ್ನು ಗೋ ಮಹಾಧರ್ಣ ಎಂಬ ಸಂಘಟನೆ ಸೋಮವಾರ ಮಾಡಿತು.

“ಗೋವು ಹಿಂದುಗಳ ಪವಿತ್ರ ಪ್ರಾಣಿ. ಆದರೂ ಅವು ಈ ಮಣ್ಣಿನಲ್ಲಿ ಕಡಿಯಲ್ಪಡುತ್ತಿದೆ. ದನವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು. ಆವರೆಗೆ ಇದು ಕೊನೆಗೊಳ್ಳುವುದಿಲ್ಲ” ಎಂದು ಧರಣಿ ನಿರತರು ಡೆಕ್ಕನ್ ಕ್ರಾನಿಕಲ್‍ಗೆ ತಿಳಿಸಿದರು.

ಜನವರಿ ಎಂಟಕ್ಕೆ ಈ ಬೇಡಿಕೆಯೊಂದಿಗೆ ವಿಜಯವಾಡ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ತೀರ್ಮಾನಿಸಲಾಗಿದೆ. ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸುವ ತೀರ್ಮಾನಕ್ಕೆ ತೆಲಂಗಾಣ ಬ್ರಾಹ್ಮಿಣ್ ಜಾಯಿಂಟ್ ಆಕ್ಷನ್ ಸಮಿತಿ ಇನ್‌ಚಾರ್ಜ್ ಎನ್.ರಂಜಿನಿ ರಾವ್ ಬೆಂಬಲ ಘೋಷಿಸಿದ್ದಾರೆ.