ಕೇರಳ: ಒಂದೂವರೆ ವರ್ಷದ ಮಗುವಿನಲ್ಲಿ ಶಿಗೆಲ್ಲ ರೋಗ ದೃಢ

0
297

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ,ಡಿ.24: ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆ ಕರೆತರಲಾದ ಒಂದೂವರೆ ವರ್ಷದ ಗಂಡು ಮಗುವಿಗೆ ಸಿಗೆಲ್ಲ ರೋಗ ದೃಢಪಟ್ಟಿದೆ.

ಫರೋಕ್ ಕಲ್ಲಂಪಾರೆಯ ಒಂದೂವರೆ ವರ್ಷದ ಮಗುವಿಗೆ ಶಿಗೆಲ್ಲ ಕಂಡು ಬಂದಿದ್ದು ತೀವ್ರ ಹೊಟ್ಟೆನೋವಿನ ಸಮಸ್ಯೆಯಿಂದಾಗಿ ಮೂರು ದಿವಸಗಳ ಹಿಂದೆ ಮಗುವನ್ನು ಫರೋಕ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಇಲ್ಲಿ ಪರೀಕ್ಷೆ ನಡೆಸಿದಾಗ ಮಗುವಿಗೆ ಶಿಗೆಲ್ಲ ರೋಗ ತಗುಲಿರುವುದು ದೃಢವಾಗಿದೆ. ನಂತರ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಮಗುವನ್ನು ದಾಖಲಿಸಲಾಗಿದೆ.

ಈ ಹಿಂದೆ ಮೆಡಿಕಲ್ ಕಾಲೇಜು ಸಮೀಪ ಕೊಟ್ಟಾಂಪರಂಬ್ ಎಂಬಲ್ಲಿ ಶಿಗೆಲ್ಲ ರೋಗ ಕಂಡು ಬಂದಿತ್ತು. ಆದರೆ ಇದಕ್ಕೂ ಕಲ್ಲಂಪಾರೆಯ ಮಗುವಿನ ಕೇಸಿಗೂ ಯಾವುದೇ ಸಂಬಂಧ ಇಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.