ಸನ್ಮಾರ್ಗ ವಾರ್ತೆ
ಫೆಲೆಸ್ತೀನ್ ಕೈದಿಗಳಿಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲು ಅನುಮತಿ ನೀಡುವ ಪ್ರಸ್ತಾಪಕ್ಕೆ ಇಸ್ರೇಲ್ ಪಾರ್ಲಿಮೆಂಟ್ ಅಂಗೀಕಾರ ನೀಡಿದೆ. ಫೆಲೆಸ್ತೀನಿಯರಿಗೆ ಪ್ರಬಲ ಸಂದೇಶವನ್ನು ರವಾನಿಸುವುದಕ್ಕೂ ಮತ್ತು ಕೈದಿಗಳಿಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವುದಕ್ಕೂ ಈ ಕ್ರಮ ಅಗತ್ಯವಿದೆ ಎಂದು ಇಸ್ರೇಲ್ನ ರಕ್ಷಣಾ ಸಚಿವ ಇತಾಮೆರ್ ಬಿಗಿನ್ ಹೇಳಿದ್ದಾರೆ.
2022ರ ಕೊನೆಯಲ್ಲಿ ನೇತನ್ಯಾಹು ಅವರ ಪಕ್ಷ ಮತ್ತು ಬೆನ್ಗಿರ್ ಅವರ ಪಕ್ಷ ಒಮ್ಮತದೊಂದಿಗೆ ಸರಕಾರ ರಚಿಸುವಾಗ ಈ ಪ್ರಸ್ತಾಪವನ್ನು ಮಾಡಲಾಗಿತ್ತು. ಫೆಲಸ್ತೀನಿ ಕೈದಿಗಳಿಗೆ ಮರಣದಂಡನೆಯನ್ನು ವಿಧಿಸುವ ಬಗ್ಗೆ ಷರತ್ತುಗಳನ್ನು ಹಾಕಲಾಗಿತ್ತು. ಅದರ ಪ್ರಕಾರ ಈ ಪ್ರಸ್ತಾಪನೆಯನ್ನು ತಯಾರಿಸಿ ಪಾರ್ಲಿಮೆಂಟ್ನಲ್ಲಿ ಮಂಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಗಾಝಾದ ಮೇಲಿನ ದಾಳಿಯನ್ನು ನಿಲ್ಲಿಸುವುದಕ್ಕಾಗಿ ನಿರ್ಣಾಯಕ ಚರ್ಚೆಯನ್ನು ವೈಟ್ ಹೌಸಿನಲ್ಲಿ ಟ್ರಂಪ್ ಆರಂಭಿಸಿದ್ದಾರೆ. ಇದರಲ್ಲಿ ನೇತನ್ಯಾಹು ಭಾಗವಹಿಸಿದ್ದಾರೆ. ಕದನ ವಿರಾಮಕ್ಕೆ ಸಂಬಂಧಿಸಿ ಟ್ರಂಪ್ 21 ಅಂಶಗಳ ಪ್ರಸ್ತಾಪವನ್ನು ಸಲ್ಲಿಸಿದ್ದರು. ಅದರ ಮೇಲೆ ಚರ್ಚೆ ನಡೆಯಲಿದೆ. ಈ ಪ್ರಸ್ತಾಪದಲ್ಲಿ ಗಾಜಾದ ಗವರ್ನರ್ ಆಗಿ ಮಾಜಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರನ್ನು ನಿಯೋಗಿಸುವ ಪ್ರಸ್ತಾಪವು ಇದೆ. ಈ ಮಾತುಕತೆಗಿಂತ ಮೊದಲು ಟ್ರಂಪ್ ಅವರಿಗೆ ಇಸ್ರೇಲ್ ಒತ್ತೆಯಾಳುಗಳ ಕುಟುಂಬಿಕರು ಪತ್ರ ಬರೆದಿದ್ದಾರೆ. ಆ ಪತ್ರವು ಪ್ರಸ್ತಾಪಕ್ಕೆ ಬರಲಿದೆ.
ಖತರ್ ಮೇಲಿನ ದಾಳಿಯ ಬಳಿಕ ನಾವು ಮಾತುಕತೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹಮಾಸ್ ಹೇಳಿದೆ. ಹಮಾಸ್ ನಾಯಕರನ್ನು ಗುರಿಯಾಗಿಸಿ ಖತರ್ನಲ್ಲಿ ಇಸ್ರೇಲ್ ದಾಳಿ ನಡೆಸಿತ್ತು.












