ಭದ್ರಾವತಿ: ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್(ಸ) ಅಭಿಯಾನ ಪ್ರಯುಕ್ತ ವಿಚಾರಗೋಷ್ಠಿ

0
348

ಸನ್ಮಾರ್ಗ ವಾರ್ತೆ

ಭದ್ರಾವತಿ: “ಪ್ರವಾದಿ ಮುಹಮ್ಮದ್(ಸ) ಅವರು ಅಂಧಕಾರದಲ್ಲಿ ಮುಳುಗಿದ್ದ ಒಂದು ಸಮಾಜವನ್ನು ಅದರಿಂದ ಹೊರ ತೆಗೆದು ಆ ಸಮಾಜಕ್ಕೆ ಸತ್ಯದ ನ್ಯಾಯದ ಹಾಗೂ ಭ್ರಾತೃತ್ವದ ಮೂಲಕ ಬೆಳಕನ್ನು ತೋರಿಸಿದರು” ಎಂದು ಕೋಗಲೂರು ತಿಪ್ಪೇಸ್ವಾಮಿ ಚಿಂತಕರು, ಮಾಜಿ ಅಧ್ಯಕ್ಷರು ಕ.ಸಾ.ಪ ಭದ್ರಾವತಿ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ಭದ್ರಾವತಿ ವತಿಯಿಂದ ಸ್ಥಳೀಯ ಮಸ್ಜಿದೆ ಆಯೀಶಾ ಸಭಾಂಗಣದಲ್ಲಿ ‘ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ಎಂಬ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

“ಪ್ರವಾದಿಗಳು ದೇವರನ್ನು ಪರಿಚಯಿಸಿದರು, ಈ ಜಗತ್ತಿಗೆ ಬಂದ ಎಲ್ಲ ಪ್ರವಾದಿಗಳ ಸಂದೇಶ ಏಕದೇವ ಏಕಮಾನವ ಕುಲ ಎಂಬುದಾಗಿತ್ತು, ಪ್ರಸ್ತುತ ಸಮಾಜವು ಪ್ರವಾದಿ ಅವರನ್ನು ಅರಿತು ಅವರ ಸಂದೇಶಗಳನ್ನು ಅನುಸರಿಸಿದರೆ ಒಂದು ಮಾದರಿ ಸಮಾಜವನ್ನು ಕಟ್ಟಿ ಬೆಳೆಸಲು ಸಾಧ್ಯ ಎಂದು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನವಹಿಸಿ ರಿಯಾಝ್ ಅಹ್ಮದ್ ರೋಣ ಸಹ ಕಾರ್ಯದರ್ಶಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಹೇಳಿದರು.

ಚಿಂತಕ ಪ್ರೊ. ಚಂದ್ರಶೇಖರ್ ಸಂದರ್ಭೋಚಿತವಾಗಿ ಮಾತನಾಡಿದರು. ಮೌಲಾನ ಸುಲ್ತಾನ್ ಬೇಗ್ ಸ್ಥಾನೀಯ ಅಧ್ಯಕ್ಷರು ಜ.ಇ. ಹಿಂದ್ ಭದ್ರಾವತಿ ಇವರ ಕುರ್ ಆನ್ ಪಠಣದೊಂದಿಗೆ ಸಮಾರಂಭವು ಆರಂಭಗೊಂಡಿತು. ಅಬ್ದುಲ್ ಖದೀರ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಮೌಲಾನ ಮುಹಮ್ಮದ್ ಸಲೀಂ ಉಮರಿ ವಲಯ ಸಂಚಾಲಕರು ಶಿವಮೊಗ್ಗ ಹಾಗೂ ಎಲ್ಲ ವರ್ಗದ ಜನರು ಉಪಸ್ಥಿತರಿದ್ದರು.