ಹಿಂದೂಗಳ ಅಪಮಾನ; ನೆಟ್‍ಫ್ಲಿಕ್ಸ್ ವಿರುದ್ಧ ಶಿವಸೇನೆ ದೂರು

0
540

ಸನ್ಮಾರ್ಗ ವಾರ್ತೆ

ಮುಂಬೈ,ಆ.4: ಹಿಂದೂಗಳನ್ನು ಮತ್ತು ಭಾರತವನ್ನು ಅಪಮಾನಿಸುತ್ತಿದೆ ಎಂದು ಆರೋಪಿಸಿ ಶಿವಸೇನೆಯ ಐಟಿ ಸೆಲ್ ನೆಟ್‍ಫ್ಲಿಕ್ಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ರಮೇಶ್ ಸೋಳಂಕಿ ಮುಂಬೈ ಎಲ್‍ಟಿಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಸೆಕ್ರೆಡ್ ಗೇಮ್ಸ್, ಲೈಲಾ, ಗೋಲ್ ಮುಂತಾದ ಸರಣಿಗಳನ್ನು ಬೆಟ್ಟು ಮಾಡಿ ದೂರು ಸಲ್ಲಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಿಂದೂಗಳು ಮತ್ತು ಭಾರತವನ್ನು ಕೆಟ್ಟದಾಗಿ ನೆಟ್‍ಫ್ಲಿಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೆಟ್‍ಫ್ಲಿಕ್ಸ್ ಇಂಡಿಯಾದ ಎಲ್ಲ ಸೀರಿಸ್‍ಗಳು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅವಮಾನ ತರುವ ಉದ್ದೇಶದಿಂದ ನಿರ್ಮಾಣವಾಗಿದೆ. ಆಳದಲ್ಲಿ ಬೇರೂರಿರುವ ಹಿಂದೂ ಫೋಬಿಯಾ ಇದರ ಹಿಂದಿದೆ ಎಂದು ಸೋಳಂಕಿ ದೂರಿನಲ್ಲಿ ವಿವರಿಸಿದ್ದಾರೆ. ಮೇಲೆ ಸೂಚಿಸಿದ ಸೀರಿಯಲ್‍ಗಳ ಸಾರಾಂಶ ಪರಿಶೀಲಿಸಿ ನೆಟ್‍ಫ್ಲಿಕ್ಸ್‌ನ ಲೈಸನ್ಸ್ ರದ್ದುಪಡಿಸುವುದಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಿವಸೇನೆ ಮನವಿ ಮಾಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮುಂಬೈ ಪೊಲೀಸ್ ಆಯುಕ್ತರಿಗೂ ದೂರಿನ ಪ್ರತಿಯನ್ನು ಕಳುಹಿಸಿಕೊಡಲಾಗಿದೆ. ಅಮೆರಿಕ ಕೇಂದ್ರವಾಗಿರುವ ಆನ್‍‌ಲೈನ್ ಸ್ಟ್ರೀಮಿಂಗ್ ವೆಬ್‍ಸೈಟ್ ನೆಟ್‍ಫ್ಲಿಕ್ಸ್ ಆಗಿದೆ.