ಸನ್ಮಾರ್ಗ ವಾರ್ತೆ
ಕೊಲ್ಕತಾ,ಸೆ.4: ಆಸಾರಾಮ್ ಬಾಪು, ರಾಮ್ ರಹೀಂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಭಾರತ ಕ್ರಿಕೆಟಿಗ ಮುಹಮ್ಮದ್ ಶಮಿ ಕೂಡ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಅವರ ಮಾಜಿ ಪತ್ನಿ ಹಸೀನಾ ಜಹಾನ್ ಹೇಳಿದ್ದಾರೆ.
ಶಮಿಗೆ ಬಿಸಿಸಿಐ ಮತ್ತು ಕೆಲವು ಹಿರಿಯ ಕ್ರಿಕೆಟಿಗರ ಬೆಂಬಲ ಇದೆ. ಅಲ್ಲದಿದ್ದರೆ ಅವರು ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಿದ್ದರು. ನಾನು ಒಂದೂವರೆ ವರ್ಷದಿಂದ ಹೋರಾಡುತ್ತಿದ್ದೇನೆ. ನನಗೆ ನಿರಾಶೆಯಾಗಿದೆ. ನಾನು ಆರ್ಥಿಕವಾಗಿ ಶಕ್ತಳಲ್ಲ. ನನಗೆ ಯಾರ ಬೆಂಬಲವೂ ಇಲ್ಲ ಎಂದು ಜಹಾನ್ ಹೇಳಿದರು. ನಾನು ಎತ್ತಿದ ಎಲ್ಲ ಆರೋಪಗಳು ಸಾಬೀತಾಗಲಿದೆ. ಜೊತೆಗೆ ನ್ಯಾಯವ್ಯವಸ್ಥೆಗೆ ಎಲ್ಲರೂ ಸಮಾನರು. ನಾನು ಸಂತೋಷಹೊಂದಿರುವೆ ಮತ್ತು ಕೃತಜ್ಞಳಾಗಿರುವೆ ಎಂದು ಜಹಾನ್ ಹೇಳಿದ್ದಾರೆ.
ಭಾರತ ಆಟಗಾರ ಎನ್ನುವ ಪರಿಗಣನೆಯಲ್ಲಿ ಶಮಿ ಪ್ರಕರಣದಿಂದ ಪಾರಾಗುವರೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಶಮಿ ಯಾವ ಶಕ್ತಿಯನ್ನೂ ತೋರಿಸಿಯಾರು. ಅವರಿಗೆ ಧಾರಾಳ ಬೆಂಬಲ ದೊರೆಯುತ್ತಿದೆ. ಆದರೆ ಅವನ ಪಾಪಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಒಂದು ದಿವಸ ಅವನು ಮಾಡಿದ್ದಕ್ಕೆ ಬೆಲೆ ತೆರಲೇ ಬೇಕಾಗುತ್ತದೆ ಎಂದು ಹಸೀನಾ ಜಹಾನ್ ಹೇಳಿದರು.
ಭಾರತ ದಂಡ ಸಂಹಿತೆ 498 ಎ ಪ್ರಕಾರ ಗೃಹ ಹಿಂಸೆ 354ರ ಪ್ರಕಾರ ಲೈಂಗಿಕ ಕಿರುಕುಳ ಪ್ರಕಾರ ಶಮಿ ವಿರುದ್ಧ ಆರೋಪ ಪಟ್ಟಿಯನ್ನು ಪೊಲೀಸರು ಕೋರ್ಟಿಗೆ ಸಲ್ಲಿಸಿದ್ದಾರೆ. ಶಮಿ ವಿರುದ್ಧ ಒಂದಕ್ಕಿಂತ ಹೆಚ್ಚು ಆರೋಪಗಳನ್ನು ಹೊರಿಸಿ ಹಸೀನಾ ಜಹಾನ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಶಮಿ ಮತ್ತು ಸಹೋದರ ಹಸಿದ್ ಅಹ್ಮದ್ಗೂ ಶರಣಾಗಲು ಮತ್ತು ಜಾಮೀನಿಗೆ ಅರ್ಜಿಸಲ್ಲಿಸಲು ಹದಿನೈದು ದಿವಸಗಳ ಸಮಯ ಕೋರ್ಟು ನೀಡಿದೆ.












