ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 8: ಜೆಎನ್ಯುಗೆ ಭೇಟಿ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಟೀಕಿಸಿದ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಜೆಎನ್ಯುಗೆ ಬದಲು ದೀಪಿಕಾ ನಾಗಪುರದ ಆರೆಸ್ಸೆಸ್ ಕೇಂದ್ರಕ್ಕೆ ಹೋಗಬೇಕಿತ್ತೇ ಎಂದು ಪ್ರಶ್ನಿಸಿದೆ. ಇದು ಭಾರತ ಆಳುವ ಸರಕಾರದ ನಿಲುವು. ಜೆಎನ್ಯು ಸಂದರ್ಶಿಸಿದ್ದರಿಂದ ದೀಪಿಕಾ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ತೀವ್ರವಾಗಿ ನಡೆಯುತ್ತಿದೆ. ಜೆಎನ್ಯುವಿನ ಬದಲು ಆರೆಸ್ಸೆಸ್ ಕೇಂದ್ರಕ್ಕೆ ದೀಪಿಕ ಭೇಟಿ ನೀಡಬೇಕಿತ್ತೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರ ಪ್ರಶ್ನಿಸಿದ್ದಾರೆ.
ಜೆಎನ್ಯುವಿನಲ್ಲಿ ಹೋರಾಡುತ್ತಿರುವ ವಿದ್ಯಾಥಿಗಳೊಂದಿಗೆ ಪ್ರಧಾನಿ, ಮೋದಿ, ಅಮಿತ್ಶಾ ಚರ್ಚಿಸುವ ಕೆಲಸವನ್ನು ಈಗ ಮಾಡಬೇಕಿದೆ. ಆದರೆ ಅದರ ಬದಲು ದೀಪಿಕಾ ವಿರುದ್ಧ ಅಭಿಯಾನ ಸಂಘಟಿಸಲು ಬಿಜೆಪಿಗೆ ಆಸಕ್ತಿಯಾಗಿದೆ ಎಂದು ಖೇರ ಆರೋಪಿಸಿದರು. ಮಂಗಳವಾರ ರಾತ್ರೆ ದೀಪಿಕಾ ಪಡುಕೋಣೆ ಜೆಎನ್ಯುಗೆ ಭೇಟಿ ನೀಡಿದ್ದರು.












