ಭಾವನೆಗೆ ಧಕ್ಕೆಯಾಗುತ್ತದೆ ಎಂದಾದರೆ ಬೇರೆ ಪುಸ್ತಕ ಓದಿ: ಸಲ್ಮಾನ್ ಖುರ್ಷಿದ್‌ರ ಪುಸ್ತಕ ನಿಷೇಧಿಸುವುದಿಲ್ಲ- ದಿಲ್ಲಿ ಹೈಕೋರ್ಟ್ ತೀರ್ಪು

0
237

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಬರೆದ ಪುಸ್ತಕವನ್ನು ನಿಷೇಧಿಸಲು ದಿಲ್ಲಿ ಹೈ ಕೋರ್ಟು ನಿರಾಕರಿಸಿದೆ. ಇದಕ್ಕೆ ಸಂಬಂಧಿಸಿ ದಾಖಲಾದ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯವು ಆ ಪುಸ್ತಕ ಭಾವನೆಗೆ ಹಾನಿ ಮಾಡುವುದಾದರೆ ಜನರಲ್ಲಿ ಬೇರೆ ಪುಸ್ತಕ ಓದಲು ಹೇಳಿರಿ ಎಂದು ಕೋರ್ಟು ಸೂಚಿಸಿತು.

ಬೇರೆ ಯಾವುದಾದರೂ ಉತ್ತಮ ಪುಸ್ತಕ ಪಡೆದು ಓದಿದರೆ ಸಾಕು ಎಂದು ಹೇಳಿರಿ. ಅವರನ್ನು ಯಾರೂ ಈ ಪುಸ್ತಕವನ್ನೇ ಖರೀದಿಸಬೇಕೆಂದು ಒತ್ತಾಯಿಸಲ್ಲವಲ್ಲ. ನಿಮ್ಮ ಭಾವನೆಗೆ ಹಾನಿ ಆಗವುದಾದರೆ ಅದಕ್ಕಿಂತ ಉತ್ತಮವಾದ ಯಾವುದಾದರೂ ಬೇರೆ ಪುಸ್ತಕ ಓದಿ ಎಂದು ಕೋರ್ಟು ಹೇಳಿದೆ.

ಸಲ್ಮಾನ್ ಖುರ್ಷಿದ್‌ರ ಪುಸ್ತಕ ವಿರುದ್ಧ ಬಿಜೆಪಿ ಕಾರ್ಯಕರ್ತ ವಕೀಲ ವಿನೋದ್ ಜಿಂದಲ್, ರಾಜ್ ಕಿಶೋರ್ ಅರ್ಜಿ ಸಲ್ಲಿಸಿದ್ದರು. ಇವರು ಶಾಂತಿ ಕದಡುವ ಪುಸ್ತಕ ಎಂದು ವಾದಿಸಿದ್ದರು. ಬಲವಾದ ಹಿಂದುತ್ವವಾದವನ್ನೂ ತೀವ್ರ ಮುಸ್ಲಿಂ ಕೋಮುವಾದಿ ಐಎಸ್, ಬೊಕೊ ಹರಾಂ ನಂತಹ ಸಂಘಟನೆಗಳನ್ನು ಹೋಲಿಸಲಾಗುತ್ತಿದೆ ಎಂದು ವಕೀಲರು ವಾದಿಸಿದ್ದರು. ಇವರ ವಾದವನ್ನು ಹೈಕೋರ್ಟು ತಿರಸ್ಕರಿಸಿದೆ.

ಈ ಹಿಂದೆ ಹಿಂದೂ ಸೇನೆ ಅಧ್ಯಕ್ಷ ವಿಷ್ಣು ಗುಪ್ತ ಅರ್ಜಿಯಲ್ಲಿ ದಿಲ್ಲಿ ಕೋರ್ಟು ಪುಸ್ತಕ ನಿಷೇಧಿಸಲು ನಿರಾಕರಿಸಿತ್ತು. ಪುಸ್ತಕದಲ್ಲಿ ಹೇಳಿದ ವಿಷಯದಿಂದ ದೇಶದಲ್ಲಿ ಕೋಮು ಘರ್ಷಣೆಗೆ ಕಾರಣವಾಯಿತೊ ಎಂದು ಕೋರ್ಟು ಕೇಳೀತು. ಕೋಮು ಗಲಭೆ ಆಗುತ್ತದೆ ಎಂದು ಎನ್ನುವುದು ಹೆದರಿಕೆಯನ್ನು ಸೃಷ್ಟಿಸುವ ಕಾರ್ಯ ಎಂದು ಕೋರ್ಟು ನಿರೀಕ್ಷಿಸಿತು.