ದಿಲ್ಲಿ ಗಲಭೆ, ಭೀಮಾ ಕೊರೆಗಾಂವ್ ಗಲಭೆ ಮಾಡಿದ್ದು ‘ಬಿಜೆಪಿ’- ಹ್ಯೂಮನ್ ರೈಟ್ಸ್ ವಾಚ್

0
967

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.17: ಮುಸ್ಲಿಮರ ವಿರುದ್ಧ ದಿಲ್ಲಿ ಕೋಮು ಗಲಭೆ ಮತ್ತು ದಲಿತರ ವಿರುದ್ಧ ನಡೆದಿದ್ದ ಭೀಮ ಕೊರೆಗಾಂವ್ ಗಲಭೆಯನ್ನು ಮಾಡಿರುವುದು ಭಾರತದ ಆಡಳಿತ ಪಕ್ಷವಾದ ಬಿಜೆಪಿಯ ಬೆಂಬಲಿಗರೆಂದು ನ್ಯೂಯಾರ್ಕ್‌ನ್ನು ಕೇಂದ್ರವಾಗಿಟ್ಟು ಕಾರ್ಯಾಚರಿಸುವ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ ತಿಳಿಸಿದೆ.

ದಿಲ್ಲಿಯ ಕೋಮುದಾಳಿಯ ನೆಪದಲ್ಲಿ ಹೋರಾಟಗಾರರು ಮತ್ತು ಅಕಾಡಮಿಕ್ ವಿದ್ವಾಂಸರು, ವಿದ್ಯಾರ್ಥಿ ನಾಯಕರ ಮೇಲೆ ನಿರಾಧಾರವಾದ ಆರೋಪಗಳನ್ನು ಹೊರಿಸಲಾಗಿದ್ದು ಅದನ್ನು ಕೂಡಲೇ ಹಿಂಪಡೆಯಬೇಕೆಂದು ಸಂಘಟನೆ ಆಗ್ರಹಿಸಿತು.

ಸೆ.13ಕ್ಕೆ ದಿಲ್ಲಿ ಗಲಭೆಯ ಪ್ರಧಾನ ಸಂಚುಕೋರರಲ್ಲಿ ಪ್ರಧಾನ ಆರೋಪಿಯೆಂದು ಹೋರಾಟಗಾರ ಉಮರ್ ಖಾಲಿದ್‍ರನ್ನು ಬಂಧಿಸಲಾಗಿದೆ ಎಂದು ಮಾನವಹಕ್ಕುಗಳ ಹೋರಾಟಗಾರರು ಗುಂಪು ಆರೋಪಿಸಿದೆ.

ದಿಲ್ಲಿ ಕೋಮು ದಾಳಿಗಳಿಗೆ ಸಂಬಂಧಿಸಿದಂತೆ ಭಾರತೀಯ ಆಡಳಿತ ಹೆಚ್ಚು ರಾಜಕೀಯ ಪ್ರೇರಿತವಾಗಿ ಪ್ರಕರಣಗಳನ್ನು ಸೃಷ್ಟಿಸುತ್ತಿವೆ. ಸರಕಾರದ ಟೀಕಾಕಾರರ ವಿರುದ್ಧ ದೇಶದ್ರೋಹ ಮತ್ತು ಭಯೋತ್ಪಾದನಾ ಕಾನೂನುಗಳನ್ನು ಹೊರಿಸಲಾಗುತ್ತಿದೆ.

ಭೀಮ ಕೊರೆಗಾಂವ್ ಪ್ರಕರಣದಲ್ಲಿ ದಲಿತ ನಾಯಕರನ್ನು ಕಳೆದ ಸೆಪ್ಟಂಬರ್ ಏಳರಂದು ಬಂಧಿಸಲಾಯಿತು. ಭೀಮ ಕೊರೆಗಾಂವ್ ಗಲಭೆಯೂ ದಿಲ್ಲಿಯ ಕೋಮು ಗಲೆಭೆಯೂ ಬಿಜೆಪಿಯ ಬೆಂಬಲಿಗರು ಮಾಡಿದ್ದಾರೆ. ಸರಕಾರದ ನೀತಿಯನ್ನು ಶಾಂತಿಯುತವಾಗಿ ಟೀಕಿಸುವವರೆಲ್ಲರ ಮೇಲೆ ಪ್ರಾಸಿಕ್ಯೂಟ್ ಮಾಡುವುದು ಬಿಜೆಪಿಯ ಯೋಜನೆಯಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ದಕ್ಷಿಣ ಏಷಿಯ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದರು.

ಸೀತಾರಾಂ ಯೆಚೂರಿ, ಹೋರಾಟಗಾರ ಯೋಗೇಂದ್ರ ಯಾದವ್, ಅರ್ಥ ತಜ್ಞೆ ಜಯಂತಿ ಘೋಷ್, ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅಪೂರ್ವ ಆನಂದ ಮುಂತಾದವರನ್ನು ದಿಲ್ಲಿ ಗಲಭೆಯಲ್ಲಿ ಪೊಲೀಸರು ಸೇರಿಸಿದ್ದಾರೆ. ನಿವೃತ್ತ ಹಿರಿಯ ಪೊಲೀಸಧಿಕಾರಿಗಳು, ಜಡ್ಜ್‌ಗಳು, ವಿಶ್ವಸಂಸ್ಥೆಯ ತಜ್ಞರ ಸಹಿತ ಭಾರತದ ಹೊರಗೆ ಮತ್ತು ಒಳಗೆ ಈ ಬಂಧನಗಳನ್ನು ಕಟುವಾಗಿ ಟೀಕಿಸುತ್ತಿದ್ದಾರೆ ಎಂದು ಮೀನಾಕ್ಷಿ ಗಂಗೂಲಿ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.