Demonetisation: ಕಳಚುತ್ತಿರುವ ಸುಳ್ಳುಗಳ ಪೊರೆ..

0
1470

ಇರ್ಶಾದ್ ಬೆಂಗಳೂರು

ನವೆಂಬರ್ 8 , 2016 ರ ರಾತ್ರಿ ಟಿವಿ ಪರದೆಯ ಮೇಲೆ ಕಾಣಿಸಿಕೊಂಡ ಪ್ರಧಾನಿ ಮೋದಿ ನಾಳೆಯಿಂದ 500 ಮತ್ತು 1000 ಗಳ ನೋಟುಗಳು ಚಲಾವಣೆಯಲ್ಲಿರುವುದಿಲ್ಲವೆಂದು ದೇಶದ ಜನತೆಗೆ ಶಾಕ್ ಕೊಟ್ಟಿದ್ದರು.

ಕಪ್ಪುಹಣಕ್ಕೆ ಕಡಿವಾಣ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆಗಳಿಗೆ ಪ್ರಬಲ ಹೊಡೆತ ನೀಡುವುದು Demonetisation ನ ಉದ್ದೇಶವೆಂದು ಸಾರಿದ್ದರು.

ಗಡಿಯಾಚೆಗಿನ ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಸಿಗುವುದು ನಕಲಿ ಕರೆನ್ಸಿಯ ರೂಪದಲ್ಲಿ , ಹೀಗಾಗಿ ಸರ್ಕಾರದ ಈ ನಿರ್ಧಾರದಿಂದ ಭಯೋತ್ಪಾದಕರ ಮತ್ತು ನಕ್ಸಲರ ಬೆನ್ನು ಮೂಳೆ ಮುರಿದಂತಾಗುತ್ತದೆ ಎಂದು ಹೇಳಿದ್ದರು.

ಹಾಗಾದರೆ Demonetisation ನ ಈ ಉದ್ದೇಶ ಈಡೇರಿತೆ ?
ಭಯೋತ್ಪಾದನಾ ಚಟುವಟಿಕೆ ಕಡಿಮೆಯಾಯಿತೆ ? ನಕ್ಸಲ್ ರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ ?

ಸ್ವತಃ ಕೇಂದ್ರ ಸರ್ಕಾರದ ಅಧಿಕೃತ ಅಂಕಿ ಅಂಶಗಳು ಇವೆಲ್ಲಾ ಪ್ರಶ್ನೆಗಳಿಗೆ ಇಲ್ಲ ಎಂಬ ಉತ್ತರ ನೀಡುತ್ತವೆ.

ನವೆಂಬರ್ 1 , 2016 ಮತ್ತು ಅಕ್ಟೋಬರ್‌ 31 ರ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ 341 ಭಯೋತ್ಪಾದನಾ ಘಟನೆಗಳು ನಡೆದಿದ್ದು ಅದರ ಹಿಂದಿನ ವರ್ಷ 311 ಘಟನೆಗಳು ನಡೆದಿದ್ದವು ಎಂದು ಕೇಂದ್ರದ ರಾಜ್ಯ ಗೃಹ ಮಂತ್ರಿ ಹಂಸರಾಜ್ ಅಹಿರ್ ಡಿಸೆಂಬರ್ 19 ರಂದು ಲೋಕಸಭೆಗೆ ತಿಳಿಸಿದರು.
ಅಂದರೆ Demonetisation ಆದ ನಂತರ ಭಯೋತ್ಪಾದನಾ ಚಟುವಟಿಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ.

ಎರಡು ತಿಂಗಳ ಹಿಂದೆ ಛತ್ತೀಸ್ಗಢದಲ್ಲಿ ಎನ್ ಕೌಂಟರ್ ನಡೆದ ಸ್ಥಳದಲ್ಲಿ ನಕ್ಸಲರು ಲಕ್ಷಾಂತರ ರೂಪಾಯಿ ಹಳೆಯ ನೋಟುಗಳನ್ನು ಬದಲಾಯಿಸಿ ಹೊಸ ಕರೆನ್ಸಿ ಪಡೆದಿರುವ ದಾಖಲೆಗಳು ದೊರೆತಿವೆ.

ಸ್ವತಃ ಛತ್ತೀಸ್ಗಢದ Special Director General , Anti Naxal operations ಆಗಿರುವ D M ಅಸ್ವಥಿ ಯವರು ಹಳ್ಳಿ ಜನ ಮತ್ತು ಗುತ್ತಿಗೆದಾರರನ್ನು ಉಪಯೋಗಿಸಿಕೊಂಡು ನಕ್ಸಲರು ಹಳೆಯ ನೋಟುಗಳನ್ನು ಬದಲಾಯಿಸಿಕೊಂಡಿರಬಹುದೆಂದು ಒಪ್ಪಿಕೊಳ್ಳುತ್ತಾರೆ.

ಕಳೆದ 2 ವರ್ಷಗಳಿಂದ ಕೇವಲ ಪತ್ರಿಕಾ ಪ್ರಕಟಣೆಗಳಿಗೆ ಸೀಮಿತವಾಗಿದ್ದ ಉಲ್ಫಾ ಉಗ್ರರು ಸಹ ಇತ್ತೀಚೆಗೆ ಅಸ್ಸಾಮ್ ಮತ್ತು ಅರುಣಾಚಲ ಪ್ರದೇಶದಲ್ಲಿ ಅಪಹರಣದಂತಹ ಚಟುವಟಿಕೆಗಳ ಮುಖಾಂತರ ಕ್ರಿಯಾಶೀಲರಾಗಿದ್ದಾರೆ.

ಒಟ್ಟಲ್ಲಿ Demonetisation ನಿಂದಾಗಿ ನಕ್ಸಲ್ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆಂಬ ಪ್ರಧಾನಿಯವರ ಮಾತು ಸುಳ್ಳಾಗಿದೆ.