ನಟ ದಿಲೀಪ್ ಕುಮಾರ್ ಕಿರಿಯ ಸಹೋದರ ಕೋವಿಡ್‌‌ಗೆ ಬಲಿ

0
451

ಸನ್ಮಾರ್ಗ ವಾರ್ತೆ

ಮುಂಬೈ,ಆ.21: ಹಿರಿಯ ಬಾಲಿವುಡ್ ನಟ ದಿಲೀಪ್ ಕುಮಾರ್‌ರವರ ಕಿರಿಯ ಸಹೋದರ ಅಸ್ಲಂ ಖಾನ್ ಕೊರೋನದಿಂದ ಮೃತಪಟ್ಟಿದ್ದು, ಅವರಿಗೆ 88 ವರ್ಷ ವಯಸ್ಸಾಗಿತ್ತು.

ಶುಕ್ರವಾರ ಬೆಳಗ್ಗೆ ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ಅವರು ನಿಧನರಾದರು. ರಕ್ತದೊತ್ತಡ, ಮಧುಮೇಹ, ಹೈಪರ್‍ಟೆನ್ಸನ್ ಹೃದ್ರೋಗವಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ದೃಢಪಟ್ಟದ್ದರಿಂದ ದಿಲೀಪ್ ಕುಮಾರ್ ಸಹೋದರರಾದ ಅಸ್ಲಂ ಖಾನ್, ಇಶಾನ್ ಖಾನ್‍ರನ್ನು ಕಳೆದ ಶನಿವಾರ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ಆಕ್ಸಿಜನ್ ಸಾಚುರೇಶನ್ ಶೇ.80ಕ್ಕಿಂತಲೂ ಕೆಳಮಟ್ಟದಲ್ಲಿತ್ತು. ಉಸಿರುಗಟ್ಟುತ್ತಿದ್ದ ಅಸ್ಲಂ ಖಾನ್‍ರನ್ನು ತೀವ್ರ ನಿಗಾ ವಿಭಾಗದಲ್ಲಿರಿಸಿ ಉಪಚರಿಸಲಾಗಿತ್ತು.

ಇಶಾನ್ ಖಾನ್‍ರಿಗೆ 90 ವರ್ಷ ವಯಸ್ಸಾಗಿದ್ದು, ಅವರನ್ನು ತೀವ್ರ ನಿಗಾ ವಿಭಾದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎಪ್ರಿಲ್‍ನಿಂದ ನಟ ದಿಲೀಪ್ ಕುಮಾರ್ ಜನ ಸಂಪರ್ಕದಿಂದ ದೂರವಿರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.