ಚೀಫ್ ಜಸ್ಟಿಸ್ ಸ್ಥಾನ ದುರುಪಯೋಗ ಆರೋಪ: ಮಾಜಿ ಸಿಜೆಐ ರಂಜನ್ ಗೊಗೊಯಿ ವಿರುದ್ಧ ಅರ್ಜಿ ತಿರಸ್ಕೃತ

0
495

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.21: ಮಾಜಿ ಸಿಜೆಐ ರಂಜನ್ ಗೊಗೊಯಿ ಸ್ಥಾನಮಾನ ದುರುಪಯೋಗಿಸಿದ್ದಾಗಿ ಆರೋಪಿಸಿ ಈ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟು ತಳ್ಳಿಹಾಕಿದೆ.

ಸುಪ್ರೀಂಕೋರ್ಟಿನ ಜಡ್ಜ್ ಆಗಿದ್ದ ಸಮಯದಲ್ಲಿ ಗೊಗೊಯಿ ಪಕ್ಷಪಾತದಿಂದ ವರ್ತಿಸಿದ್ದಾರೆಂದು ಅರ್ಜಿಯಲ್ಲಿ ಆರೋಪ ಹೊರಿಸಲಾಗಿತ್ತು. ಗೊಗೊಯಿ ಸುಪ್ರೀಂ ಕೋರ್ಟಿನಿಂದ ನಿವೃತ್ತರಾದ್ದರಿಂದ ಅರ್ಜಿ ಸ್ವೀಕರಿಸಲಾಗದೆಂದು ಅರ್ಜಿಯನ್ನು ತಿರಸ್ಕರಿಸಲಾಗಿದೆ.

2018ರಲ್ಲಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಸುಪ್ರೀಂಕೋರ್ಟು ರಿಜಿಸ್ಟಾರ್ ಅರ್ಜಿಯನ್ನು ಲೀಸ್ಟ್ ಮಾಡಲಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.

ಈ ವಿಷಯವನ್ನು ಬೆಟ್ಟು ಮಾಡಿ ಹಲವು ಬಾರಿ ರಿಜಿಸ್ಟ್ರಾರ್‌ಗೆ ಪತ್ರ ಬರೆದರೂ ಕ್ರಮ ಜರಗಿಸಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಜುಲೈ 2016ಕ್ಕೆ ಸಂಬಂಧಿಸಿದ ಒಂದು ಪ್ರಕರಣದ ತೀರ್ಪಿನಲ್ಲಿ ಗೊಗೊಯಿ ಪಕ್ಷಪಾತದಿಂದ ವರ್ತಿಸಿದ್ದು ಇದರಲ್ಲಿ ತನಿಖೆ ನಡೆಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.