ಮಂಗಳೂರಿನಿಂದ ಜಿದ್ದಕ್ಕೆ ನೇರ ಏರ್ ಇಂಡಿಯಾ ವಿಮಾನ: ಬುಧವಾರದ ಹಾರಾಟಕ್ಕೆ ಬುಕಿಂಗ್ ಶುರು

0
368

ಸನ್ಮಾರ್ಗ ವಾರ್ತೆ

ಮಂಗಳೂರಿನಿಂದ ಜಿದ್ದಾಕ್ಕೆ ಸಂಪರ್ಕ ಬೆಸೆಯಲು ಏರ್‌ಇಂಡಿಯಾ ಸಜ್ಜಾಗಿದೆ. ಈ ವಿಮಾನವು ಪ್ರತಿ ಬುಧವಾರ ಸಂಚರಿಸುತ್ತಿದ್ದು, ಈಗಾಗಲೇ ಏರ್‌ಇಂಡಿಯಾ ಎಕ್ಸ್ ಪ್ರೆಸ್ ಇದಕ್ಕೆ ಬುಕಿಂಗ್ ಆರಂಭಿಸಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿದ್ದಾಕ್ಕೆ ಎಪ್ರಿಲ್ 3 ರಿಂದ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಮಂಗಳೂರಿನಿಂದ ಐಎಕ್ಸ್ 499 ವಿಮಾನವು ಮಧ್ಯಾಹ್ನ 2.50 ಕ್ಕೆ ಹೊರಟು ಜಿದ್ದಾದ ಸಮಯ ಸಂಜೆ 6.25 ತಲಪಲಿದೆ. ಹಿಂಪ್ರಯಾಣದಲ್ಲಿ ಐಎಕ್ಸ್ 498 ವಿಮಾನವು ಜಿದ್ದಾದಿಂದ 7.25 ರಾತ್ರಿ ಹೊರಟು ಗುರುವಾರ ಮುಂಜಾನೆ 3.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲಪುವುದು.