ಸನ್ಮಾರ್ಗ ವಾರ್ತೆ
ಮುಂಬೈ: ದೇಶದ್ರೋಹ ಪ್ರಕರಣದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಬಾಂದ್ರಾ ಪೊಲೀಸ್ ಠಾಣೆಗೆ ಇಂದು ಹಾಜರಾಗಿದ್ದಾರೆ.
ಎರಡು ಬಾರಿ ಸಮನ್ಸ್ ಕಳಿಸಿದ ಮೇಲೆಯೂ ತಪ್ಪಿಸಿಕೊಂಡಿದ್ದರಿಂದ ಕೊನೆಗೆ ಮುಂಬೈ ಹೈಕೋರ್ಟ್ ಸೂಚನೆ ಮೇರೆಗೆ ಶುಕ್ರವಾರ ಮಧ್ಯಾಹ್ನ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾರೆ.
ಕೋಮುವಾದಿ ಟ್ವೀಟ್ಗಳಲ್ಲಿ ಕಂಗನಾರ ವಿರುದ್ದ ವಕೀಲರೊಬ್ಬರು ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ದೂರು ನೀಡಿದ್ದರು. ನಂತರ ಕೋರ್ಟ್ ನಿರ್ದೇಶನದ ಪ್ರಕಾರ ಕಂಗನಾ ವಿರುದ್ಧ ಬಾಂದ್ರಾ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಲವಾರು ಬಾರಿ ಸಮನ್ಸ್ ಕಳುಹಿಸಿದ್ದರೂ ಕೂಡ ಹಲವು ಕಾರಣಗಳನ್ನು ಹೇಳಿ ತಪ್ಪಿಸಿಕೊಂಡಿದ್ದಲ್ಲದೇ, ಕೇಸು ರದ್ದು ಪಡಿಸಬೇಕೆಂದು ಬಾಂಬೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.
ಕಂಗನಾ ವಿರುದ್ಧ ದೇಶ ದ್ರೋಹ ಆರೋಪ ಹೊರಿಸಿರುವುದನ್ನು ಪ್ರಶ್ನಿಸಿದರೂ ಮುಂಬೈ ಹೈಕೋರ್ಟ್ ಕೇಸು ರದ್ದುಪಡಿಸಲಿಲ್ಲ. ಶುಕ್ರವಾರ ಮಧ್ಯಾಹ್ನ 12 ಮತ್ತು 2 ಗಂಟೆಯೊಳಗೆ ಪೊಲೀಸ್ ಠಾಣೆಯಲ್ಲಿ ಹಾಜರಿರಬೇಕೆಂದು ಕೋರ್ಟು ಆದೇಶ ನೀಡಿತ್ತು. ಕೋರ್ಟ್ ನ ಆದೇಶದ ಮೇರೆಗೆ ಇಂದು ಬಾಂದ್ರಾ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.












