ಔರಂಗಜೇಬ್ ಜಾತ್ಯತೀತ ವಾದಿಯಾಗಿರಲಿಲ್ಲ: ಔರಂಗಾಬಾದಿನ ಹೆಸರು ಬದಲಾವಣೆ ಸಮರ್ಥಿಸಿಕೊಂಡ ಉದ್ಧವ್ ಠಾಕ್ರೆ

0
437

ಸನ್ಮಾರ್ಗ ವಾರ್ತೆ

ಮುಂಬೈ,ಜ.9: ಔರಂಗಾಬಾದಿನ ಹೆಸರಿಗೆ ಸಂಬಂಧಿಸಿ ಮಹಾರಾಷ್ಟ್ರ ಆಡಳಿತ ಸಖ್ಯದಲ್ಲಿ ವಿವಾದ ಹುಟ್ಟಿಕೊಂಡಿದ್ದು ಔರಂಗಾಬಾದಿನ ಹೆಸರು ಸಾಂಬಾಜಿ ನಗರ ಎಂದು ಮಾಡಬೇಕೆಂದು ಶಿವಸೇನೆ ಹೇಳುತ್ತಿದೆ. ಇದನ್ನು ಕಾಂಗ್ರೆಸ್ ಒಪ್ಪಿಕೊಂಡಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಹೆಸರು ಬದಲಾವಣೆಯನ್ನು ಬೆಂಬಲಿಸಿದ್ದಾರೆ.

ಮಹಾರಾಷ್ಟ್ರದ ಸಖ್ಯದ ಅಜೆಂಡಾ ಜಾತ್ಯತೀತತೆಯಾಗಿದ್ದು ಆದುದರಿಂದ ಮೊಗಲ ದೊರೆ ಔರಂಗಝೇಬನ ಹೆಸರು ನೀತಿಗೆ ಒಪ್ಪುವಂತಹದಲ್ಲ ಎಂದು ಬಿಜೆಪಿಯನ್ನು ಬಿಟ್ಟು ಬಂದು ಶಿವಸೇನೆ ಸೇರಿದ ವಸಂತ್ ಗೇಟಿ ಮತ್ತು ಸುನೀಲ್ ಬಾಗುಲ್‍ರನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.

ಔರಂಗಾಬಾದ್ ಬದಲು ಮರಾಠ ದೊರೆ ಸಾಂಬಾಜಿ ಸ್ಮರಣಾರ್ಥ ಸಾಂಬಾಜಿ ನಗರ ಎಂದು ಹೆಸರು ಇಡಲು ನಿರ್ಧರಿಸಲಾಗಿದೆ. ಔರಂಗಝೇಬ್ ಯಾವತ್ತೂ ಜಾತ್ಯತೀತ ವಾದಿಯಾಗಿರಲಿಲ್ಲ. ನಮ್ಮ ಅಜೆಂಡ ಜಾತ್ಯತೀತಗೆ ಸೇರಿರುವುದು. ಆದ್ದರಿಂದ ಆ ಹೆಸರು ಈ ಅಜೆಂಡಾಕ್ಕೆ ಒಪ್ಪುವುದಿಲ್ಲ ಎಂದು ಠಾಕ್ರೆ ಹೇಳಿದರು. ನಾನು ಯಾವ ಹೊಸ ಕೆಲಸ ಮಾಡಿದೆ ನಾವು ಕಾಲಕಾಲದಿಂದ ಹೇಳುತ್ತಾ ಬಂದುದು ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆ ಹೇಳಿದ್ದನ್ನು ನಾನು ಕಾರ್ಯರೂಪಕ್ಕೆ ತರುತ್ತಿದ್ದೇನೆ ಎಂದು ಉದ್ಧವ್ ಠಾಕ್ರೆ ಹೇಳಿದರು.

ಬುಧವಾರ ಸಚಿವ ಸಂಪುಟ ಸಭೆಯ ವಿವರವನ್ನು ಅಧಿಕೃತ ಟ್ವಿಟರ್ ಖಾತೆಯಲ್ಲಿ ನೀಡಿದಾಗ ಔರಂಗಾಬಾದನ್ನು ಸಾಂಬಾಜಿ ನಗರವೆಂದು ಠಾಕ್ರೆ ಹೇಳಿದ್ದರು. ಈ ಟ್ವೀಟ್ ಶಿಕ್ಷಣ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅಮಿತ್ ದೇಶ್‍ಮುಖ್‍ರನ್ನು ಟ್ಯಾಗ್ ಮಾಡಿತ್ತು. ಗುರುವಾರ ಸಾಂಬಾಜಿ ನಗರ ಎಂದು ಸೂಚಿಸುವ ಪೋಸ್ಟ್‌ಗಳನ್ನು ಠಾಕ್ರೆ ಹಂಚಿಕೊಂಡಿದ್ದಾರೆ.