ಮೋಹನ್ ಭಾಗವತ್‌ಗೆ ವೀಸಾ ನೀಡಬೇಡಿ: ಬ್ರಿಟಿಷ್ ವಲಸಿಗ ಒಕ್ಕೂಟ ಆಗ್ರಹ

0
306

ಸನ್ಮಾರ್ಗ ವಾರ್ತೆ

ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರಿಗೆ ಲಂಡನ್ ಭೇಟಿಗೆ ಅವಕಾಶ ನೀಡಬಾರದು ಮತ್ತು ವೀಸಾ ಮತ್ತು ರಾಜತಾಂತ್ರಿಕ ಸೌಲಭ್ಯಗಳನ್ನು ಅವರಿಗೆ ನಿರಾಕರಿಸಬೇಕು ಎಂದು ಬ್ರಿಟನ್ನಿನಲ್ಲಿರುವ ವಲಸಿಗ ಸಂಘಟನೆಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರ ಜಂಟಿ ಒಕ್ಕೂಟ ಒತ್ತಾಯಿಸಿದೆ. ಆರ್ ಎಸ್ ಎಸ್ ಮತ್ತು ಸಂಘ ಪರಿವಾರದಿಂದ ಉಂಟಾಗುವ ಬೆದರಿಕೆಗಳು ನಿಜವಾಗಿವೆ ಮತ್ತು ಅವು ನಿರಂತರವಾಗಿವೆ ಎಂದು ಈ ಒಕ್ಕೂಟವು ಹೇಳಿದೆ. ಇತ್ತೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿದಾಗಲೂ ಮೋಹನ್ ಭಾಗವತ್ ಅವರಿಗೆ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತು.

ಯಹೂದಿಗಳನ್ನು ನಿರ್ನಾಮ ಮಾಡುವ ಹಿಟ್ಲರ್ ನ ಯೋಜನೆಯಿಂದ ಪ್ರೇರಿತವಾದ ಮತ್ತು ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಅದನ್ನು ಜಾರಿಗೆ ತರಲು ಬಯಸುವ ಚಳವಳಿಯ ಮುಖ್ಯಸ್ಥ ಎಂದು ಮೋಹನ್ ಭಾಗವತ್ ಅವರನ್ನು ಒಕ್ಕೂಟವು ಹೇಳಿದೆ.

ಭಾರತದಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳ ವಿರುದ್ಧ ದೌರ್ಜನ್ಯಗಳು ಮತ್ತು ದ್ವೇಷ ಅಭಿಯಾನಗಳ ಹಿಂದಿನ ಸಿದ್ಧಾಂತವನ್ನು ಮುನ್ನಡೆಸುವ ವ್ಯಕ್ತಿ ಬ್ರಿಟಿಷ್ ನೆಲಕ್ಕೆ ಬರಬಾರದು ಎಂದು ಈ ಗುಂಪು ಹೇಳಿಕೆಯಲ್ಲಿ ತಿಳಿಸಿದೆ.

ಈ ಗುಂಪು ಬ್ರಿಟನ್ ಗೃಹ ಕಾರ್ಯದರ್ಶಿ, ಶಬಾನ ಮಹಮ್ಮದ್ ಅವರಿಗೆ ತಮ್ಮ ಬೇಡಿಕೆಯನ್ನು ಸಲ್ಲಿಸಿದೆ.