ಸೀರೆ ಉಡುತ್ತೀರಾ? ಹಾಗಿದ್ದರೆ ನಿಮಗೆ ಚರ್ಮ ಕ್ಯಾನ್ಸರ್ ಬರಲೂಬಹುದು

0
2330

ಸನ್ಮಾರ್ಗ ವಾರ್ತೆ

ಸಾರಿ ಮತ್ತು ಅದಕ್ಕೆ ಸಂಬಂಧಿಸಿದ ಒಳ ವಸ್ತ್ರವನ್ನು ಸೊಂಟಕ್ಕೆ ಬಿಗಿಯಾಗಿ ಕಟ್ಟುವವರಿಗೆ ಎಚ್ಚರಿಕೆಯ ಸಂದೇಶವೊಂದು ಬಿಡುಗಡೆಯಾಗಿದೆ. ಹೀಗೆ ಸೊಂಟಕ್ಕೆ ಬಿಗಿಯಾಗಿ ನಿರಂತರ ಕಟ್ಟುವುದರಿಂದ ಅಲ್ಸರ್ ಮತ್ತು ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶದ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನ ವೈದ್ಯರು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಬ್ರಿಟಿಷ್ ಮೆಡಿಕಲ್ ಜರ್ನಲ್ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಈ ವರದಿಯ ಮಾಹಿತಿ ಇದೆ. ಪರಂಪರಾಗತ ವಸ್ತ್ರ ಸಂಪ್ರದಾಯಗಳು ಮತ್ತು ಆರೋಗ್ಯ ಸಂಬಂಧಿ ವಿಷಯಗಳು ಎಂಬ ಶೀರ್ಷಿಕೆಯಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ.

ಪೆಟಿಕೋಟ್ ಕ್ಯಾನ್ಸರ್ ಬಾಧಿತ ಇಬ್ಬರು ಮಹಿಳೆಯರಿಗೆ ತಾನು ಚಿಕಿತ್ಸೆ ಕೊಡುತ್ತಿರುವುದಾಗಿ ವೈದ್ಯರು ಈ ವರದಿಯಲ್ಲಿ ವಿವರಿಸಿದ್ದಾರೆ. ಸಾರಿ ಅಥವಾ ಒಳ ವಸ್ತ್ರ ಅಥವಾ ಪೆಟ್ಟಿಕೋಟನ್ನು ಸೊಂಟದ ಭಾಗಕ್ಕೆ ಬಲವಾಗಿ ಕಟ್ಟುವುದರಿಂದ ರೋಗ ಬರುವ ಸಾಧ್ಯತೆ ಇದೆ ಎಂದು ವೈದ್ಯರು ಇದರಲ್ಲಿ ತಿಳಿಸಿದ್ದಾರೆ.

ಇದನ್ನು ಸಾರಿ ಕ್ಯಾನ್ಸರ್ ಎಂದು ಈ ಹಿಂದೆ ಸಂಬೋಧಿಸಲಾಗಿರುವುದನ್ನು ವೈದ್ಯರು ವಿವರಿಸಿದ್ದಾರೆ. ಈ ಕ್ಯಾನ್ಸರ್ ಗೆ ಒಳಗಾದ 70 ವರ್ಷದ ಮಹಿಳೆಯ ಅಭಿಪ್ರಾಯವೂ ಈ ವರದಿಯಲ್ಲಿದೆ. ಹಾಗೆಯೇ 60 ವರ್ಷದ ಮಹಿಳೆಯ ಅಭಿಪ್ರಾಯವನ್ನೂ ಈ ವರದಿಯಲ್ಲಿ ದಾಖಲಿಸಲಾಗಿದೆ.

ಈ ಮಹಿಳೆ ಕಳೆದ 40 ವರ್ಷಗಳಿಂದ ಸಾರಿಯನ್ನು ಧರಿಸುತ್ತಿದ್ದರು, ಸೊಂಟದ ಭಾಗಕ್ಕೆ ಸಾರಿಯನ್ನು ಬಲವಾಗಿ ಕಟ್ಟುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.