ಡಾ| ಶಾಮಿದ್; ಯುನಾನಿಯಲ್ಲಿ ದೇಶಕ್ಕೇ 4ನೇ ರ‌್ಯಾಂಕ್, ರಾಜ್ಯಕ್ಕೆ ಪ್ರಥಮ

0
4278

ಸನ್ಮಾರ್ಗ ವಾರ್ತೆ-

ವಿಜಯಪುರ: ಡಾ| ಶಾಮಿದ್ ಬಿ. (ಶಮೀಮ) ಅವರು ಯುನಾನಿ ಎಂ.ಡಿ. ಪ್ರವೇಶ ಪರೀಕ್ಷೆಯಲ್ಲಿ ಭಾರತ ದೇಶಕ್ಕೇ 4ನೇ ರ‌್ಯಾಂಕ್ ಹಾಗೂ ಕರ್ನಾಟಕ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಗಳಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವರು ಪಡೆದ ಅಂಕ 98.96%

.

ಮೂಲತಃ ಇಲಕಲ್‍ನವರಾದ ಇವರು ಬೆಂಗಳೂರಿನ ಸರಕಾರಿ ಯುನಾನಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾಗಿ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ತಮ್ಮ ಬಿ.ಯು.ಎಮ್.ಎಸ್. ಪದವಿಯಲ್ಲಿಯೂ ಪ್ರಥಮ ರ‌್ಯಾಂಕ್ ಪಡೆದಿದ್ದರು. ಈಗ ಸ್ನಾತಕೋತ್ತರ ಪರೀಕ್ಷೆಯಲ್ಲಿ ಈ ಅಪೂರ್ವ ಸಾಧನೆಗೈದಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಇವರು ಗೈದ ಸಾಧನೆ ಪರಿಗಣಿಸಿ, ಇಲಕಲ್ ಹಾಗೂ ಹುನಗುಂದದಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ತಮ್ಮ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಬೀದರ್ ನ ಶಾಹೀನ್ ಪದವಿ ಪೂರ್ವ ವಿಶ್ವವಿದ್ಯಾಲಯದಲ್ಲಿ ಕಲಿತು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

ಇವರು ವಿಜಯಪುರದ ಖ್ಯಾತ ವೈದ್ಯ ಮತ್ತು ಸಾಹಿತಿಗಳಾದ ಡಾ| ಅಮೀರುದ್ದೀನ್ ಖಾಝಿಯವರ ಸೊಸೆಯಾಗಿದ್ದಾರೆ.