ಅಯ್ಯೋ ಪಾಪ ಅನ್ನಬೇಡಿ, ಈಕೆ ನೂರ್ ಜಲೀಲಾ: ದೌರ್ಬಲ್ಯವನ್ನು ಮೀರಿ ನಿಂತ ಪ್ರತಿಭೆ

0
1260

ಸನ್ಮಾರ್ಗ ವಾರ್ತೆ-

ತಿರುವನಂತಪುರಂ; ಆ. ಈ ಹುಡುಗಿಯ ಸಾಧನೆಯ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಅಯ್ಯೋ ಪಾಪ ಎಂದು ನೀವು ಮನಸ್ಸಲ್ಲೇ ಹೇಳಬಹುದು. ಆದರೆ, ಆಕೆಯ ಪ್ರತಿಭೆಯನ್ನು ಕಂಡರೆ ನೀವು ಆಚರಿಯಾಗಬಹುದು. ಈಕೆಗೆ ಕೈಗಳು ಸಾಂಕೇತಿವಾಗಿ ಮಾತ್ರ ಇದೆ. ಕಾಲುಗಳು ಇಲ್ಲ. ಆದರೆ, ಅಪಾರ ಜೀವನೋತ್ಸಾಹದ ಚಿಲುಮೆ ಕೇರಳದ ಕೋಝಿಕೋಡ್ ಮೂಲದ 17 ವರ್ಷದ ಈ ಯುವತಿ. ಹೆಸರು ನೂರ್ ಜಲೀಲ.ಹುಟ್ಟಿನಿಂದಲೇ ವಿಶೇಷ ಚೇತನ. ಆದರೆ, ಸಾಧನೆ ಮಾಡಲು ಮನಸ್ಸು ಇದ್ದರೆ ಸಾಕು ಯಾವುದೇ ಅಡ್ಡಿಗಳನ್ನು ಹಿಮ್ಮೆಟ್ಟಿ ಗುರಿ ತಲುಪಬಹುದು ಅನ್ನುವುದನ್ನು ಈಕೆ ಸಾಧಿಸಿ ತೋರಿಸಿದ್ದಾಳೆ.

ಕೈ ಮತ್ತು ಕಾಲುಗಳಲ್ಲಿ ಊನತೆ ಇದ್ದರೂ ಈಕೆ ಆದರೆ ಮೈಕ್ ಹಿಡಿದು ಮಾತಿಗೆ ನಿಂತರೆ ಸಭೆ ಮಂತ್ರಮುಗ್ದವಾಗುತ್ತದೆ. ತನ್ನ ಭಾಷಣಗಳ ಮೂಲಕ ಹಲವರಿಗೆ ಈಕೆ ಪ್ರೇರಣೆಯಾಗಿದ್ದಾಳೆ. ವಯೊಲಿನ್ ನುಡಿಸುವುದೆಂದರೆ ಈಕೆ ಇಷ್ಟ. ಅದರಲ್ಲಿ ಆಕೆ ಪರಿಣತಲೂ ಹೌದು. ಹಾಡು, ಚಿತ್ರಕಲೆ, ಭಾಷಣ ಮಾಡುವುದು ಹೀಗೆ ಬಹುಮುಖ ಪ್ರತಿಭೆಯನ್ನು ಜಲೀಲಾ ಹೊಂದಿದ್ದಾರೆ.

ಚಿಕ್ಕ ವಯಸ್ಸಿನಲ್ಲಿದ್ದಾಗ ಒಂದು ದಿನ ಜಲೀಲಾ ಪುಸ್ತಕದಲ್ಲಿ ಬಣ್ಣ ಹಚ್ಚುತ್ತಿದ್ದರಂತೆ. ಇದನ್ನು ನೋಡಿದ ಪೋಷಕರು ಮಗಳನ್ನುಹುರಿದುಂಬಿಸಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು. ಬಳಿಕ 7ನೇ ತರಗತಿಯಲ್ಲಿದ್ದಾಗ ವಯೊಲಿನ್ ನುಡಿಸುವುದನ್ನು ಕಲಿತರು. ಚಿತ್ರಕಲೆಯ ಜೊತೆಗೆ ಸಂಗೀತವನ್ನು ಕರಗತ ಮಾಡಿಕೊಂಡರು. ಇವತ್ತು ಆಕೆ ಸುಮ್ಮನಾಗಿಲ್ಲ. ತನ್ನಂತೆ ವಿಶೇಷ ಚೇತನ ಮಕ್ಕಳಿಗೆ ಪ್ರೇರಣೆ ನೀಡುತ್ತಿದ್ದಾರೆ.