ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಆರೋಗ್ಯ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ವ್ಯಾಕ್ಸಿನ್ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡೊದರು. ಇದಕ್ಕೆ ವಿಶೇಷ ವ್ಯವಸ್ಥೆ ಮಾಡುವುದು ಮತ್ತು ಜಾಗೃತಿ ಮಾಡುವುದು ತಪ್ಪುಕಲ್ಪನೆ ನಿವಾರಣೆಗೆ ಸ್ಥಳೀಯ ಧಾರ್ಮಿಕ ನಾಯಕರ ನೆರವು ಕೇಳುವುದಾಗಿ ಮೋದಿ ಹೇಳಿದರು. ದೇಶದಲ್ಲಿ ಲಸಿಕೆ ಕಡಿಮೆ ಹಾಕಿಸಿಕೊಂಡ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಸೂಚನೆ ನೀಡಿದರು.
ಎಲ್ಲರಿಗೂ ವ್ಯಾಕ್ಸಿನೇಶನ್ ಮಾಡಬೇಕಾದ ಅಗತ್ಯವನ್ನು ಅವರು ಎತ್ತಿ ಹೇಳಿದರು. ಹಬ್ಬ ಬರುತ್ತಿದೆ ಆದುದರಿಂದ ಹೆಚ್ಚು ಮುಂಜಾಗೃತೆ ವಹಿಸಬೇಕೆಂದು ಅವರು ಸೂಚಿಸಿದರು.
12 ರಾಜ್ಯಗಳ 40 ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಕೆಳಗಿನ ಜನರು ಮಾತ್ರ ಮೊದಲ ಡೋಸ್ ಪಡೆದಿದ್ದಾರೆ. ಕೊರೋನ ಎದುರಿಸುವ ಫಲಪ್ರದ ಮಾರ್ಗ ಲಸಿಕೆ ಪಡೆಯುವುದಾಗಿದೆ. ಶಿಬಿರ ಹಾಗೂ ಆಸ್ಪತ್ರೆಳಿಗೆ ತೆರಳಿ ವ್ಯಾಕ್ಸಿನ್ ತೆಗೆದುಕೊಳ್ಳಲು ಆಗದವರಿಗೆ ಮನೆಗೆ ಹೋಗಿ ವ್ಯಾಕ್ಸಿನ್ ಕೊಡಬೇಕೆಂದು ಪ್ರಧಾನಿ ಸೂಚಿಸಿದರು. ಮೂರನೇ ಅಲೆಯ ಪೂರ್ವಭಾವಿ ಕೊರೋನ ಪ್ರತಿರೋಧ ಊರ್ಜಿತಗೊಳಿಸುವಂತೆ ರಾಜ್ಯಗಳಿಗೆ ಪ್ರಧಾನಿ ಕರೆ ನೀಡಿದರು.












