ದುಬೈಯಲ್ಲಿ ಮತ್ತೊಂದು ಬಸ್ ಅಪಘಾತ: ಭಾರತೀಯರ ಸಹಿತ 8 ಜನರ ಸಾವು

0
1244

ಸನ್ಮಾರ್ಗ ವಾರ್ತೆ

ದುಬೈ,ಸೆ.30:ಭಾರೀ ವೇಗದಿಂದ ಧಾವಿಸಿ ಬಂದ ಬಸ್ ಒಂದು ನಿಂತಿದ್ದ ಟ್ರಕ್‍ಗೆ ಗುದ್ದಿದ ಪರಿಣಾಮವಾಗಿ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಬಸ್ ಅತೀ ವೇಗದಿಂದ ಧಾವಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‍ನಲ್ಲಿ ನಲ್ವತ್ತು ಮಂದಿ ಪ್ರಯಾಣಿಕರಿದ್ದರು. ಹೆಚ್ಚಿನವರು ತಮಿಳ್ನಾಡಿನ ಕಾರ್ಮಿಕರು. ಉಳಿದಂತೆ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಪ್ರಜೆಗಳು ಬಸ್‍ನೊಳಗಿದ್ದರು.