ಸನ್ಮಾರ್ಗ ವಾರ್ತೆ
ರಸ್ತೆ ಅಪಘಾತಗಳನ್ನು ತಡೆಯಲು ಮತ್ತು ಪಾದಚಾರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದುಬೈ ಪೊಲೀಸರು ಹೊಸ ಜಾಗೃತಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ರಸ್ತೆ ದಾಟುವವರಿಗೆ ತಕ್ಕ ಶಾಸ್ತಿ ಕಾದಿದೆ.
ಫೆಡರಲ್ ಟ್ರಾಫಿಕ್ ಕಾನೂನಿನ ಆರ್ಟಿಕಲ್ 89 ರ ಪ್ರಕಾರ, ಸಿಗ್ನಲ್ಗಳನ್ನು ನಿರ್ಲಕ್ಷಿಸಿ ಅಥವಾ ನಿಗದಿತವಲ್ಲದ ಸ್ಥಳಗಳಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೆ 400 ದಿರ್ಹಮ್ ದಂಡ ವಿಧಿಸಲಾಗುತ್ತದೆ.
ರಸ್ತೆ ದಾಟಲು ಯಾವಾಗಲೂ ಜೆಬ್ರಾ ಕ್ರಾಸ್ಟಿಂಗ್ ಅಥವಾ ನಿಗದಿತ ಪಾದಚಾರಿ ಮಾರ್ಗಗಳನ್ನೇ ಬಳಸಿ. ಟ್ರಾಫಿಕ್ ಸಿಗ್ನಲ್ಗಳನ್ನು ಕಡ್ಡಾಯವಾಗಿ ಪಾಲಿಸಿ ಮತ್ತು ರಸ್ತೆ ಸುರಕ್ಷಿತವಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಂಡು ಮುಂದೆ ಸಾಗಿ.
ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮತ್ತು ಪಾದಚಾರಿ ದಾಟುವ ವಲಯಗಳಲ್ಲಿ ವಾಹನಗಳ ವೇಗವನ್ನು ತಗ್ಗಿಸಬೇಕು ಹಾಗೂ ಪಾದಚಾರಿಗಳಿಗೆ ಮುನ್ನಡೆ ನೀಡಬೇಕು ಎಂದು ಚಾಲಕರಿಗೆ ಸೂಚಿಸಲಾಗಿದೆ.
ಸಾರ್ವಜನಿಕರಲ್ಲಿ ಮತ್ತು ಪ್ರವಾಸಿಗರಲ್ಲಿ ರಸ್ತೆ ಸುರಕ್ಷತೆಯ ಜಾಗೃತಿ ಮೂಡುವುದು ಹಾಗೂ ಅಪಘಾತಗಳ ಸಂಖ್ಯೆಯನ್ನು ಸಂಪೂರ್ಣವಾಗಿ ತಗ್ಗಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ.
ರಸ್ತೆ ಸುರಕ್ಷತೆ ಎಂಬುದು ಎಲ್ಲರ ಜವಾಬ್ದಾರಿಯಾಗಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ದುಬೈನ ರಸ್ತೆಗಳನ್ನು ಸುರಕ್ಷಿತವಾಗಿರಿಸಲು ಸಹಕರಿಸುವಂತೆ ದುಬೈ ಪೊಲೀಸರು ಮನವಿ ಮಾಡಿದ್ದಾರೆ.












