ದುಬೈ: ಇನ್ನು ಮಸೀದಿ ಪ್ರದೇಶದ ಪಾರ್ಕಿಂಗ್ ಸ್ಥಳಗಳಿಗೂ ಫೀಸ್

0
394

ಸನ್ಮಾರ್ಗ ವಾರ್ತೆ

ದುಬೈ ಮಸೀದಿ ಪರಿಸರದ ಪಾರ್ಕಿಂಗ್ ಸ್ಥಳಗಳಲ್ಲಿ ವಾರದ ಎಲ್ಲಾ ದಿನವೂ 24 ಗಂಟೆಯೂ ಪಾರ್ಕಿಂಗ್ ಫೀಸ್ ಅನ್ನು ನಿಗದಿಗೊಳಿಸಲಾಗಿದೆ. ನಮಾಝ್ ನ ಸಮಯದಲ್ಲಿ ಒಂದು ಗಂಟೆ ಮಾತ್ರ ಈ ಪಾರ್ಕಿಂಗ್ ಫೀಸ್ ಗೆ ವಿನಾಯಿತಿ ನೀಡಲಾಗಿದೆ.

ಆಗಸ್ಟ್ ಒಂದರಿಂದ ವಾರದ ಎಲ್ಲಾ ದಿವಸವು 24 ಗಂಟೆಯೂ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವ ನಿಯಮ ಜಾರಿಗೆ ಬಂದಿದೆ.

ಎಂ ಮತ್ತು ಎಂಪಿ ಎಂಬ ಕೋಡ್ ಗಳ ಮೂಲಕ ಮಸೀದಿಗಳ ಸಮೀಪದ ಪಾರ್ಕಿಂಗ್ ಝೋ ನ್ ಗೆ ಹೆಸರಿಡಲಾಗಿದೆ. ಇದರಲ್ಲಿ 41 ಮಸೀದಿಗಳಿಗೆ ಸಮೀಪ ಇರುವ ಪಾರ್ಕಿಂಗ್ ಸ್ಥಳವನ್ನು ಎಂ ಝೋನ್ ಎಂದು ಮತ್ತು 18 ಪಾರ್ಕಿಂಗ್ ಸ್ಥಳಗಳನ್ನು ಎಂ ಪಿ ಝೋನ್ ಗಳೆಂದು ಗುರುತಿಸಲಾಗಿದೆ.ಪ್ರೀಮಿಯಂ ಪಾರ್ಕಿಂಗ್ ಪ್ರದೇಶಗಳನ್ನು ಎಂ ಪಿ ಝೋನ್ ಎಂದು ಗುರುತಿಸಲಾಗಿದೆ.

ಎಂ ಝೋನಿನಲ್ಲಿ ಅರ್ಧಗಂಟೆಗೆ ಎರಡು ದಿರ್ಹಮ್ ಮತ್ತು ಒಂದು ಗಂಟೆಗೆ ನಾಲ್ಕು ದಿರ್ ಹಂ ಶುಲ್ಕ ಪಾವತಿಸಬೇಕಾಗುತ್ತದೆ. ಎಂಪಿ ಝೋನ್ ನಲ್ಲೂ ಸಾಮಾನ್ಯ ಸಮಯದಲ್ಲಿ ಇದೆ ಶುಲ್ಕವಾಗಿದ್ದರೂ ನಿಬಿಢ ಸಮಯದಲ್ಲಿ ಅರ್ಧ ಗಂಟೆಗೆ ಮೂರು ದಿರ್ಹಮ್ ಮತ್ತು ಒಂದು ಗಂಟೆಗೆ ಆರು ದಿರ್ಹಮ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.