ಇರಾನಿನಲ್ಲಿ ಭೂಕಂಪನ: ಇಬ್ಬರ ಸಾವು, ಹಲವಾರು ಮಂದಿಗೆ ಗಾಯ

0
491

ಸನ್ಮಾರ್ಗ ವಾರ್ತೆ

ಟೆಹ್ರಾನ್, ಎ. 9: ಕೊರೊನಾ ವ್ಯಾಪನದ ಅಪಾಯದ ನಡುವೆಯೇ ಇರಾನಿನಲ್ಲಿ ಭೂಕಂಪನವೂ ಆಗಿದೆ. ಕಂಪನದ ತೀವ್ರತೆ 5.1 ಇತ್ತು. ಇಬ್ಬರು ಮೃತಪಟ್ಟಿದ್ದು 22 ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಉತ್ತರ ಇರಾನಿನ ದಮಾವಂದಿಯಲ್ಲಿ ಭೂಕಂಪ ಆಗಿದೆ. ಹತ್ತು ಕಿಲೋಮೀಟರ್ ಸುತ್ತಳತೆಯಲ್ಲಿ ಕಂಪನದ ಅನುಭವವಾಗಿದೆ ಎಂದು ಅಮೆರಿಕದ ಜಿಯಾಲಜಿಕಲ್ ಸರ್ವೇ ತಿಳಿಸಿತು. ಮೃತಪಟ್ಟವರಲ್ಲಿ 21 ವಯಸ್ಸಿನ ಯುವತಿ ಮತ್ತು 60 ವರ್ಷದ ಹಿರಿಯ ನಾಗರಿಕರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ತೀವ್ರಗತಿಯಲ್ಲಿ ಭೂಮಿ ಕಂಪಿಸಿತು ಎಂದು ಸ್ಥಳೀಯರು ಅಲ್‍ಜಝೀರ ಟಿವಿ ಚ್ಯಾನೆಲ್‍ಗೆ ತಿಳಿಸಿದ್ದಾರೆ. ರಾಜಧಾನಿ ಟೆಹ್ರಾನ್‍ನಲ್ಲಿ ಜನರು ಹೆದರಿ ಗುಂಪುಗುಂಪಾಗಿ ನಿಂತ ಚಿತ್ರಗಳು ಹೊರಬಂದಿದೆ. ಜನರು ಗುಂಪುಗಾಗಿ ಓಡಿದ್ದರಿಂದ ಕೊರೊನ ರೋಗ ತಡೆಯುವ ನಿಟ್ಟಿನಲ್ಲಿ ಕೈಗೊಂಡಿದ್ದ ಸುರಕ್ಷಾ ಮಾನದಂಡ ಉಲ್ಲಂಘಿಸಲ್ಪಟ್ಟಿದೆ. ಹಲವಾರು ಮಂದಿ ಮನೆಯಿಂದ ಹೊರಗಿಳಿದು ಓಡಿದರು ಎಂದು ಅಲ್ ಜಝೀರ ವರದಿ ಮಾಡಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.