ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‍ನಲ್ಲಿ ಭ್ರಷ್ಟಾಚಾರ; ಫಾರೂಕ್ ಅಬ್ದುಲ್ಲರನ್ನು ವಿಚಾರಣೆಗೊಳಪಡಿಸಿದ ಇಡಿ

0
388

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.19: ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‍ನಲ್ಲಿ ಆರ್ಥಿಕ ಅಕ್ರಮ ನಡೆದಿದೆ ಎಂಬ ಪ್ರಕರಣದಲ್ಲಿ ಎನ್‍ಫೋರ್ಸ್‍ಮೆಂಟ್ ಡೈರಕ್ಟರೇಟ್ (ಇಡಿ) ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನು ವಿಚಾರಣೆಗೆ ಒಳಪಡಿಸಿರುವುದಾಹಿ ವರದಿಯಾಗಿದೆ. ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‍ನಲ್ಲಿ ಉಪಯೋಗಿಸಿದ ಫಂಡ್‍ನಲ್ಲಿ ಕಪ್ಪು ಹಣ ಬಿಳಿ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ವಿಚಾರಣೆ ನಡೆದಿದೆ.

ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದ ಫಾರೂಕ್ ಅಬ್ದುಲ್ಲ 43 ಕೋಟಿ ರೂಪಾಯಿ ದುರುಪಯೋಗಿಸಿದ್ದಾರೆ ಎಂಬ ಆರೋಪದಲ್ಲಿ ಬ್ಯಾಂಕ್ ದಾಖಲೆಗಳ ಆಧಾರದಲ್ಲಿ ವಿಚಾರಣೆ ನಡೆಸಿರುವುದಾಗಿ ಎಂದು ಇಡಿ ಮೂಲಗಳು ತಿಳಿಸಿವೆ. ಈ ಹಿಂದೆ ಇದೇ ಪ್ರಕರಣದಲ್ಲಿ 2019ರಲ್ಲಿಯೂ ಇಡಿ ವಿಚಾರಣೆ ನಡೆಸಿತ್ತು. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‍ಗೆ 2002-2011ರವರೆಗೆ ಬಿಸಿಸಿಐ 113 ಕೋಟಿ ರೂಪಾಯಿ ಅನುದಾನ ನೀಡಿತ್ತು. ಇದರಲ್ಲಿ 43.69 ಕೋಟಿ ರೂಪಾಯಿ ದುರುಪಯೋಗವಾಗಿದೆ ಎಂಬ ಆರೋಪದಲ್ಲಿ ತನಿಖೆ ನಡೆಯುತ್ತಿದೆ.

2015ರಲ್ಲಿ ಪ್ರಕರಣವನ್ನು ಹೈಕೋರ್ಟು ಸಿಬಿಐಗೆ ಹಸ್ತಾಂತರಿಸಿತ್ತು. 2018ರಲ್ಲಿ ಫಾರೂಕ್ ಅಬ್ದುಲ್ಲ ಮತ್ತು ಇತರ ಮೂವರ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಕ್ರಿಕೆಟ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಫಾರೂಕ್ ಅಬ್ದುಲ್ಲ, ಮಾಜಿ ಪ್ರಧಾನ ಕಾರ್ಯದರ್ಶಿ ಎಂಟಿ ಸಲೀಂ ಖಾನ್, ಖಜಾಂಚಿ ಅಹ್ಸರ್ ಅಹ್ಮದ್ ಮಿರ್ಝ, ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯ ಬಶೀರ್ ಅಹ್ಮದ್ ಮಿಸ್‍ಕರ್ ವಿರುದ್ಧ ಸಿಬಿಐ ಚಾರ್ಜು ಶೀಟ್ ದಾಖಲಿಸಿತ್ತು. ಇದರ ಭಾಗವಾಗಿ ಕಪ್ಪು ಹಣ ಬಿಳಿ ಮಾಡಿದ ಪ್ರಕರಣವನ್ನು ಇಡಿ ತನಿಖಿಸುತ್ತಿದೆ.