ಇದೊಂದು ಕುತೂಹಲಕಾರಿ ಸುದ್ದಿ : ಈಗಲೂ ತನ್ನ ಊರಿನಿಂದ ಕೊರೋನವನ್ನು ಹೊರಗಿಟ್ಟಿದೆ ಈ ಊರು..!

0
946

ಸನ್ಮಾರ್ಗ ವಾರ್ತೆ

ಕೇರಳ: ಕೇರಳದ ಇಡುಕ್ಕಿಯ ಇಡಮಲಕುಡಿ ಎಂಬ 3000 ಮಂದಿ ಬದುಕುತ್ತಿರುವ ಊರಿನ ಕಥೆಯಿದು. ಈವರೆಗೆ ಈ ಊರಿನ ಒಬ್ಬರು ಕೂಡಾ ಕೊರೋನಾ ಪಾಸಿಟಿವ್ ಆಗಿಲ್ಲ.

ರಾಜ್ಯದಲ್ಲಿ ಯಾವಾಗ ಸುರಕ್ಷಿತ ಅಂತರ ಮತ್ತು ಮಾಸ್ಕನ್ನು ಪಾಲಿಸಲು ಹೇಳಲಾಗಿತ್ತೋ ಅಂದಿನಿಂದ ಇಂದಿನವರೆಗೂ ಚಾಚೂ ತಪ್ಪದೇ ಇಲ್ಲಿ ಪಾಲಿಸಲಾಗುತ್ತಿದೆ.

ರೇಷನ್ ಬಿಟ್ಟು ಉಳಿದೆಲ್ಲದಕ್ಕೂ ಮುನ್ನಾರ್ ಅನ್ನು ಈ ಪಂಚಾಯತ್ ಆಶ್ರಯಿಸಿದೆ. ವಾರದಲ್ಲಿ ಒಂದು ದಿನ ವಸ್ತುಗಳನ್ನು ಖರೀದಿಸುವುದಕ್ಕಾಗಿ ಒಂದು ಜೀಪು ಮುನ್ನಾರಿಗೆ ಹೋಗುತ್ತದೆ.ಇದು ಕೋವಿಡ್ ಗಿಂತ ಮೊದಲಿದ್ದ ಸ್ಥಿತಿ. ಆದರೆ ಕೋರೋನ 2020ರಲ್ಲಿ ದೇಶಕ್ಕೆ ಅಪ್ಪಳಿಸಿದ ಬಳಿಕ ಇಲ್ಲಿನ ಪಂಚಾಯತ್ ನ ನೇತೃತ್ವದಲ್ಲಿ ಈ ಪದ್ಧತಿಗೆ ತಿಲಾಂಜಲಿ ನೀಡಲಾಯಿತು. ಅದರ ಬದಲು ಓರ್ವರು ಹೋಗಿ ಊರಿಗೆ ಬೇಕಾದ ಎಲ್ಲ ವಸ್ತುಗಳನ್ನೂ ಮುನ್ನಾರ್ ನಿಂದ ತರುವುದು.ಹಾಗೆ ಹೋದ ವ್ಯಕ್ತಿ ಮರಳಿ ಬಂದು ಎರಡು ವಾರ ಕ್ವಾರಂಟೈನ್ ಕುಳಿತುಕೊಳ್ಳುವುದು ಕಡ್ಡಾಯ ಮಾಡಿದೆ.

ಗೋತ್ರ ವರ್ಗದ ಮೊದಲ ಪಂಚಾಯತ್ ಇದಾಗಿದ್ದು ಪಂಚಾಯತಿನ ಈ ನಿರ್ಧಾರದ ಬಳಿಕ ಹೊರಗಿನಿಂದ ಅಲ್ಲಿಗೆ ಬರುವುದಕ್ಕೆ ಯಾರಿಗೂ ಅನುಮತಿ ನೀಡಲಾಗುತ್ತಿಲ್ಲ. ಅಲ್ಲದೆ ಈ ಕುರಿತಂತೆ ಎಚ್ಚರಿಕೆ ವಹಿಸುವುದಕ್ಕಾಗಿ ತಂಡವನ್ನೂ ರಚಿಸಲಾಗಿದೆ. ಚುನಾವಣೆ ಕಾಲದಲ್ಲಿ ಕೂಡ ಈ ನಿಯಮವನ್ನು ಪಾಲಿಸಿಯೇ ಈ ಊರಿನವರು ಮತ ಚಲಾಯಿಸಿದ್ದಾರೆ. ಕೋವಿಡ್ ನಿಯಮಾವಳಿಗಳನ್ನು ಇಡುಕ್ಕಿಯ ಇಡಮಲಕುಡಿಯ ಜನರು ಪ್ರಜ್ಞಾವಂತರಾಗಿ, ಚಾಚೂ ತಪ್ಪದೇ ಪಾಲಿಸುತ್ತಿರುವುದರಿಂದ ಈವರೆಗೆ ಈ ಊರಿನ ಒಬ್ಬರು ಕೂಡಾ ಕೊರೋನಾ ಪಾಸಿಟಿವ್ ಆಗಿಲ್ಲ. ಆ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ ಇಲ್ಲಿನ ಜನ.