ಸನ್ಮಾರ್ಗ ವಾರ್ತೆ
ತುಮಕೂರು: “ಶಿಕ್ಷಣವು ಮನುಷ್ಯನಿಗೆ ಸತ್ಯ ಮತ್ತು ಅಸತ್ಯಗಳ ನಡುವಿನ ಮಾರ್ಗವನ್ನು ತೋರಿಸುವ ಸಾಧನವಾಗಿದೆ, ಆದರೆ ಇಂದು ಜ್ಞಾನಗಳಿಸುವುದು ಕೇವಲ ಹಣ ಸಂಪಾದಿಸುವ ಉದ್ದೇಶ ಮಾತ್ರ ಹೊಂದಿರುವುದು ನಿಜಕ್ಕೂ ದುರಂತವೇ ಸರಿ” ಎಂದು ರಿಯಾಝ್ ಅಹ್ಮದ್ ರೋಣ ರಾಜ್ಯ ಕಾರ್ಯದರ್ಶಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಹೇಳಿದರು.
ಅವರು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ತುಮಕೂರು ವತಿಯಿಂದ ಸ್ಥಳೀಯ ಇಸ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜಮಾಅತೆ ಇಸ್ಲಾಮೀ ಹಿಂದ್ ತುಮಕೂರು ಸ್ಥಾನೀಯ ಅಧ್ಯಕ್ಷ ಮೌಲಾನಾ ಅಸ್ರಾರ್ ಉಮರಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಅಲಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶೇಖ್ ಮೊಹಮ್ಮದ್ ಅನ್ವರ್ ಮತ್ತು ಗ್ಲೋಬಲ್ ಶಾಹೀನ್ ಪಿಯು ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ಆಯೇಷಾ ಝುಬೇದಾ ಕೌಸರ್ ಅವರು ಈ ಸಂದರ್ಭದಲ್ಲಿ ಶಿಕ್ಷಣದ ಮಹತ್ವದ ಕುರಿತು ಬೆಳಕು ಚೆಲ್ಲಿದರು.
ಸಮಾರಂಭದಲ್ಲಿ ಇತ್ತೀಚಿಗೆ ಪ್ರಕಟಗೊಂಡ “ದೀನ್-ಎ-ಇಸ್ಲಾಂ” ಪುಸ್ತಕದ ಬಿಡುಗಡೆಯೂ ನೆರವೇರಿತು.
ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.













